ಸಿದ್ದಾಪುರ : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಭೂಮಿಯ ತೆವಾoಶ ಹೆಚ್ಚಾಗಿ ಕುಮಟಾ ಸಿದ್ದಾಪುರ ರಸ್ತೆಯ ಬಿಳಗಿ ಬಳಿ ರಸ್ತೆಗೆ ಧರೆ ಕುಸಿದು ವಾಹನ ಸಂಚಾರ ಕ್ಕೆ ಅಡಚಣೆ ಉಂಟಾಗಿದೆ
ಬಿಳಗಿ ಸೇತುವೆ ಬಳಿ ಧರೆ ಕುಸಿತ ಉಂಟಾದ ಪರಿಣಾಮ ಸೋಮವಾರ ಬೆಳಿಗ್ಗೆ ವಾಹನ ಸವಾರರಿಗೆ ಸಂಚಾರ ಕ್ಕೆ ತೊಂದರೆ ಉಂಟಾದ ದೃಶ್ಯ ಕಂಡು ಬಂದಿತು
ಇಂದು ಸೋಮವಾರ ಆಗಿರುವ ಕಾರಣ ಕಚೇರಿ ಗಳಿಗೆ ಕೆಲಸ ಕ್ಕೆ ತೆರಳುತ್ತಿರುವ ಅನೇಕ ಪ್ರಯಾಣಿಕರಿಗೆ ತೊಂದರೆ ಆಯಿತು
ಸದ್ಯ ದ್ವಿಚಕ್ರ ವಾಹನ ಸಂಚಾರ ಕ್ಕೆ ಅನುಕೂಲ ಮಾಡಿಕೊಡಲಾಗಿದ್ದು ಮಣ್ಣು ತೆರವು ಕಾರ್ಯ ನಡೆಯುತ್ತಿದೆ ಮದ್ಯಾಹ್ನ ಒಳಗಾಗಿ ಎಲ್ಲ ವಾಹನ ಸಂಚಾರ ಕ್ಕೂ ಅನುಕೂಲ ಮಾಡಿಕೊಡಲಾಗುತ್ತದೆ ಎಂದು ಸ್ಥಳೀಯ ಮೂಲಗಳಿಂದ ತಿಳಿದು ಬಂದಿದೆ