ವಿಶ್ವ ಐವಿಎಫ್ ದಿನ ಆಚರಿಸಿಕೊಂಡ ಬೆಂಗಳೂರಿನ ಓಯಸಿಸ್​​ ಫರ್ಟಿಲಿಟಿ ಸಂಸ್ಥೆ

ಬೆಂಗಳೂರು, ಜು.24: ಪ್ರತಿಯೊಂದು ಹೆಣ್ಣಿಗೆ ತಾಯಿತನ ಎನ್ನುವುದು ಬಹಳ ಮುಖ್ಯ. ಕಳೆದ 45 ವರ್ಷಗಳಿಂದ 10 ಮಿಲಿಯನ್ ದಂಪತಿಗಳು ಐವಿಎಫ್(ಸಹಜವಾಗಿ ಗರ್ಭಧಾರಣೆಯಾಗದಿದ್ದರೆ ಕೃತಕವಾಗಿ ಇನ್‌ ವಿಟ್ರೊ ಫರ್ಟಿಲೈಸೇಷನ್‌ ಮೂಲಕ ಗರ್ಭಧಾರಣೆ ಮಾಡುವುದು) ಮೂಲಕ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಐವಿಎಫ್ ಮೂಲಕ ಮಕ್ಕಳನ್ನು ಪಡೆಯಲು ಅನೇಕರು ಹಿಂಜರಿಯುತ್ತಿದ್ದಾರೆ. ಇದರ ಜತೆಗೆ ಬಂಜೆತನವನ್ನು ನಿವಾರಿಸಲು ಮತ್ತು ತಮ್ಮದೇ ಜೈವಿಕ ಮಗುವನ್ನು ಪಡೆಯುವ ಚಿಕಿತ್ಸೆ ಬಗ್ಗೆ ಕೂಡ ಅವರು ತಿಳಿದಿಕೊಂಡಿಲ್ಲ. ಇದನ್ನು ಗಮನಿಸಿ ಒಂದು ದೊಡ್ಡ ಮಟ್ಟದ ಅಭಿಯಾನದಂತೆ ಬೆಂಗಳೂರಿನ ಹೆಚ್​​.ಎಸ್​​.ಆರ್​ ಲೇಔಟ್​ನಲ್ಲಿರುವ ಓಯಸಿಸ್​​ ಫರ್ಟಿಲಿಟಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಬಂಜೆತನಕ್ಕೆ ಜೀವನಶೈಲಿ, ಅನುವಂಶಿಕ ಅಥವಾ ವೈದ್ಯಕೀಯ ಪರೀಕ್ಷೆಗಳು ಕಾರಣವಾಗಿರಬಹುದು. ಅದನ್ನು ಸರಿಯಾದ ಸಮಯದಲ್ಲಿ, ಸರಿಯಾದ ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯವಾಗಿರುತ್ತದೆ. 1 ವರ್ಷದ ನಂತರ ಗರ್ಭಿಣಿಯಾಗದ ದಂಪತಿಗಳು ವೈದ್ಯರನ್ನು ಭೇಟಿಯಾಗುವುದು ಮುಖ್ಯ, ಅದಕ್ಕಾಗಿ ಓಯಸಿಸ್​​ ಫರ್ಟಿಲಿಟಿ ಒಂದು ಉತ್ತಮ ಚಿಕಿತ್ಸೆ ಮತ್ತು ಮಾರ್ಗದರ್ಶನವನ್ನು ನೀಡುತ್ತಿದೆ.

ಬೆಂಗಳೂರಿನ ಹೆಚ್​​.ಎಸ್​​.ಆರ್​ ಲೇಔಟ್​ನಲ್ಲಿರುವ ಓಯಸಿಸ್​​ ಫರ್ಟಿಲಿಟಿ ಸಂಸ್ಥೆ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡುವ ಭಾರತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿದೆ. ಜು.25ಕ್ಕೆ ವಿಶ್ವ ಐವಿಎಫ್ ದಿನವನ್ನು ವಿಶ್ವದ್ಯಾಂತ ಆಚರಣೆ ಮಾಡಲಾಗುತ್ತದೆ. ಇದೀಗ ಓಯಸಿಸ್​​ ಫರ್ಟಿಲಿಟಿ ಒಂದು ದಿನದ ಮೊದಲೇ ಯಶಸ್ವಿಯಾಗಿ ಐವಿಎಫ್ ಮೂಲಕ ಮಗು ಪಡೆದ ತಾಯಿಯರೊಂದಿಗೆ ವಿಶ್ವ ಐವಿಎಫ್ ದಿನವನ್ನು ಆಚರಿಸಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಓಯಸಿಸ್​​ ಫರ್ಟಿಲಿಟಿ ಕ್ಲಿನಿಕ್​​ನ ಹೆಡ್​​ ಡಾ.ಮೇಘನಾ ನ್ಯಪತಿ, ಫರ್ಟಿಲಿಟಿ ಸ್ಪಷಲಿಸ್ಟ್​​ ಭಾಗವಹಿಸಿದರು.

ಈ ಕಾರ್ಯಕ್ರಮದ ಕುರಿತು ಮಾತನಾಡಿದ ಡಾ.ಮೇಘನಾ ನ್ಯಪತಿ, ಐವಿಎಫ್ ಮೂಲಕ ಜನಿಸಿದ ಮಕ್ಕಳನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ. ಈ ಕ್ಷಣದ ಸಂಭ್ರಮವನ್ನು ಈ ಮಕ್ಕಳ ತಾಯಂದಿರು ಅನುಭವಿಸುತ್ತಿದ್ದಾರೆ. ಪ್ರತಿಯೊಂದು ದಂಪತಿಗಳು ಬಂಜೆತನದ ಸಮಸ್ಯೆ ಅಥವಾ ಮಕ್ಕಳು ಮಾಡಿಕೊಳ್ಳಲು ಯಾವುದಾರೂ ಸಮಸ್ಯೆ ಇದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ, ಕೌನ್ಸಿಲಿಂಗ್​ ಮಾಡಿಕೊಳ್ಳಿ, ಇದು ಮುಂದಿನ ಚಿಕಿತ್ಸೆಗೆ ಸುಲಭ ಎಂದು ಹೇಳಿದರು. ಗರ್ಭ ಫಲವತತ್ತೆಗೆ ಐವಿಎಫ್ ಮಾತ್ರವಲ್ಲ ಅದಕ್ಕಿಂತ ಬೇರೆ ಬೇರೆ ತಂತ್ರಗಳು ವೈದ್ಯಲೋಕದಲ್ಲಿ ಇದೆ. PGT-A (ಪ್ರಿಇಂಪ್ಲಾಂಟೇಶನ್ ಜೆನೆಟಿಕ್​ ಟೆಸ್ಟಿಂಗ್) ERA (ಎಂಡೊಮೆಟ್ರಿಯಲ್​​ ರಿಸೆಪ್ಟಿವಿಟಿ ಅರೇ) ನಂತಹ ಸುಧಾರಿತ ತಂತ್ರಜ್ಞಾನಗಳು ಮತ್ತು MACS (ಮ್ಯಾಗ್ನೆಟಿಕ್​ ಆಕ್ಟಿವೇಟೆಡ್​ ಸೆಲ್​​ ಸಾರ್ಟಿಂಗ್) ಮೈಕ್ರೋಪ್ಲೂಯಿಡಿಕ್ಸ್​​ನಂತಹ ವೀರ್ಯ ಆಯ್ಕೆಗಳನ್ನು ಮಾಡಿಕೊಳ್ಳುವ ದಂಪತಿಗಳ ಬಂಜೆತನವನ್ನು ನಿವಾರಣೆ ಮತ್ತು ಪೀತೃತ್ವವನ್ನು ಪಡೆದುಕೊಳ್ಳುಬಹುದು ಎಂದು ಹೇಳಿದರು.

ಇನ್ನೂ ನಮ್ಮಲ್ಲಿ ಅನೇಕ ದಂಪತಿಗಳಲ್ಲಿ ತಪ್ಪು ಕಲ್ಪನೆಗಳು ಇದೆ. ಅದರಿಂದ ಹೊರಗೆ ಬರಬೇಕು. ವಯಸ್ಸಾದಂತೆ ಫಲವತ್ತತೆ ಕಡಿಮೆಯಾಗುವುದರಿಂದ ಮಕ್ಕಳು ಪಡೆಯುವುದು ಕಷ್ಟವಾಗಬಹುದು ಎಂದು ಹೇಳಿದರು. ಐವಿಎಫ್ ಮೂಲಕ ಹಲವು ದಂಪತಿಗಳು ಮಕ್ಕಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಮುಂದಕ್ಕೆ AI ಮೂಲಕ ಅನೇಕ ಸುಧಾರಿತ ತಂತ್ರಗಳು ಬರುತ್ತಿದೆ, ಇದು ಮುಂದೆಕ್ಕೆ ದಂಪತಿಗಳಿಗೆ ಇದು ವರದಾನವಾಗಲಿದೆ ಎಂದು ಹೇಳಿದರು.

ಇನ್ನೂ ಓಯಸಿಸ್​​ ಫರ್ಟಿಲಿಟಿ, ಸದ್ಗುರು ಹೆಲ್ತ್​​ ಕೇರ್​​ ಸರ್ವಿಸಸ್​​ ಪ್ರೈ.ಲಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸಂಸ್ಥೆ, ದಂಪತಿಗಳಿಗೆ ಬೇಕಾಗುವ ಆರೋಗ್ಯ ಸಲಹೆ , ಗರ್ಭ ಫಲವತ್ತತೆಯ ಬಗ್ಗೆ ಸಲಹೆ, ಕೌನ್ಸಿಲಿಂಗ್​ ಮಾಡಲು ಸಹಾಯ, ಸಮಾಲೋಚನೆ ಮಾಡುವುದು ಎಲ್ಲವನ್ನು ಒಂದೇ ಸೂರಿನಡಿಯಲ್ಲಿ ನೀಡುತ್ತಿದೆ. 2009ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಈ ಕಾರ್ಯದಲ್ಲಿ ಉನ್ನತ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ, ಅನುಭವಿ ಮತ್ತು ಖ್ಯಾತ ತಜ್ಞರ ತಂಡದಿಂದ ಇದನ್ನು ನಡೆಸಲಾಗುತ್ತಿದೆ. ಕರ್ನಾಟಕ, ಆಂಧ್ರ ಪ್ರದೇಶ, ಗುಜರಾತ್​, ತೆಲಂಗಾಣ, ಜಾರ್ಖಂಡ್​, ತಮಿಳುನಾಡು, ಮಹಾರಾಷ್ಟ್ರ, ಒಡಿಶಾ ಸೇರಿ 30 ರಾಜ್ಯಗಳಲ್ಲಿ ಇದರ ಶಾಖೆಗಳು ಇದೆ.