ದಾಂಡೇಲಿ : ಭಾರಿ ಮಳೆಯಿಂದಾಗಿ ದಾಂಡೇಲಿ ತಾಲ್ಲೂಕಿನ ಬೊಮ್ಮನಹಳ್ಳಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳ ಹರಿವು ಇರುವ ಹಿನ್ನಲೆಯಲ್ಲಿ ಜಲಾಶಯದ ಮೂರು ಗೇಟ್ ಗಳ ಮೂಲಕ 5000 ಕ್ಯೂಸೆಕ್ ನೀರನ್ನು ಭಾನುವಾರ ಕಾಳಿ ನದಿಗೆ ಬಿಡಲಾಗಿದೆ. 438.38 ಮೀಟರ್ ನೀರಿನ ಗರಿಷ್ಟ ಮಿತಿಯನ್ನು ಹೊಂದಿರುವ ಬೊಮ್ಮನಹಳ್ಳಿ ಜಲಾಶಯದಲ್ಲಿ ಒಳ ಹರಿವು ತ್ವರಿತಗತಿಯಲ್ಲಿ ಏರುತ್ತಿರುವ ಹಿನ್ನಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ದಾಂಡೇಲಿ ತಾಲ್ಲೂಕಾಡಳಿತ ಮಾಹಿತಿಯನ್ನು ನೀಡಿದೆ. ಇದೇ ಸಂದರ್ಭದಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದಿರಬೇಕೆಂದು ತಾಲ್ಲೂಕಾಡಳಿತ ತಿಳಿಸಿದೆ.