ದಾಂಡೇಲಿಯಲ್ಲಿ ಮನರಂಜಿಸಿದ “ದೀಪ ದರ್ಪಣ” ಯಕ್ಷಗಾನ ಪ್ರದರ್ಶನ

ದಾಂಡೇಲಿ : ದಾಂಡೇಲಿ ಮತ್ತು ಗುಂದದ ಯಕ್ಷಗಾನ ಪ್ರೇಮಿಗಳ ಆಶ್ರಯದಡಿ ಶ್ರೀ.ಹಟ್ಟಿಯಂಗಡಿ ಮೇಳದವರಿಂದ ನಗರದ ಶ್ರೀ.ವೀರಭದ್ರೇಶ್ವರ ಸಭಾ ಭವನದಲ್ಲಿ ನಡೆದ ದಿನೇಶ್ ಕೊಡವೂರು ವಿರಚಿತ “ದೀಪ ದರ್ಪಣ” ಎಂಬ ಯಕ್ಷಗಾನ ಪ್ರದರ್ಶನವು ಅತ್ಯುತ್ತಮವಾಗಿ ಮೂಡಿಬಂದು ಯಕ್ಷಪ್ರಿಯರ ಗಮನ ಸೆಳೆಯಿತು.

ಹಿಮ್ಮೇಳನದಲ್ಲಿ ರವಿ ಶೆಟ್ಟಿ ಹೊಸಂಗಡಿ, ಸುಧೀರ್ ಭಟ್ ಪೆರ್ಡೂರ್, ಮಂಜುನಾಥ ನಾವುಡ, ಎನ್.ಜಿ.ಹೆಗಡೆ ಯಲ್ಲಾಪುರ ಇವರು ಗಮನ ಸೆಳೆದರೇ ಇತ್ತ ಮುಮ್ಮೇಳನದಲ್ಲಿ ಶ್ರೀಧರ್ ಕಾಂಚನ್, ಶಿಥಿಲ್ ಶೆಟ್ಟಿ ಐರ್ಬೈಲ್, ಯುವರಾಜ ನಾಯ್ಕ, ಧನರಾಜ್ ಹೆಮ್ಮಾಡಿ, ರಾಜೇಶ್ ಆಚಾರ್ಯ, ಶ್ರೇಯಸ್, ಮಂಜು ಕಮಲಶಿಲೆ, ಉಮೇಶ್ ಶಂಕರನಾರಾಯಣ, ಗಣೇಶ್ ದೇವಾಡಿಗ ಅವರ ತಮ್ಮ ಮನೋಜ್ಞ ಅಭಿನಯ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯ್ತು. ಹಳ್ಳಾಡಿ ಜಯರಾಮ ಶೆಟ್ಟಿ ಮತ್ತು ದ್ವಿತೇಶ್ ಕಾಮತ್ ಅವರುಗಳ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸಿತು.

ಈ ಸಂದರ್ಭದಲ್ಲಿ ಪ್ರಮುಖರುಗಳಾದ ಎಸ್.ಪ್ರಕಾಶ್ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಕರುಣಾಕರ್ ಶೆಟ್ಟಿ, ಉದಯ ಶೆಟ್ಟಿ, ಸುಧಾಕರ ಶೆಟ್ಟಿ, ಸುರೇಶ್ ಕಾಮತ್ ಮೊದಲಾದವರು ಹಾಗೂ ಗುಂದದ ಮಂಜುನಾಥ್ ಭಾಗ್ವತ್ ಅವರ ನೇತೃತ್ವದ ಗುಂದದ ಯಕ್ಷಗಾನ ಪ್ರೇಮಿಗಳು ಮುಂಚೂಣಿಯಲ್ಲಿ ನಿಂತು ಯಕ್ಷಗಾನ ಪ್ರದರ್ಶನದ ಯಶಸ್ಸಿಗೆ ಸಹಕಸಿದ್ದರು. ಮೇಳದ ಸಂಚಾಲಕರಾದ ವಕ್ವಾಡಿ ರಂಜಿತ್ ಶೆಟ್ಟಿ ಅವರು ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.

ಎಡೆಬಿಡದೇ ಸುರಿಯುತ್ತಿರುವ ಮಳೆಯ ನಡುವೆಯು ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಪ್ರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಕರಾವಳಿಯ ಗಂಡು ಕಲೆಯಾದ ಯಕ್ಷಗಾನ ಪ್ರದರ್ಶನವನ್ನು ಪ್ರೋತ್ಸಾಹಿಸಿದರು.