ಜೋಯಿಡಾ : ತಾಲೂಕಿನೆಲ್ಲೆಡೆ ಭೀಕರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ಯಾಸಲ್ ರಾಕ್ – ಚಾಂದೇವಾಡಿ ರಸ್ತೆಯಲ್ಲಿ ಬರುವ ಸೇತುವೆ ಮುಳುಗಡೆಯಾಗಿದ್ದು, ಇದರಿಂದ ಕ್ಯಾಸಲ್ ರಾಕ್ ಮತ್ತು ಚಾಂದೇವಾಡಿ ನಡುವೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅದೇ ರೀತಿ ಕ್ಯಾಸಲ್ ರಾಕ್ ನಲ್ಲಿರುವ ಲಕ್ಷ್ಮಿವಾಡದ ಸೇತುವೆಯು ಜಲಾವೃತಗೊಂಡಿದ್ದು, ಸ್ಥಳೀಯ ಜನತೆಗೆ ಸಂಕಷ್ಟ ಎದುರಾಗಿದೆ. ತಾಲೂಕಿನ ಹಲವಡೆ ಕುಂಭದ್ರೋಣ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ.