ಜೋಯಿಡಾದ ಮೆಸ್ತಬಿರೋಡಾದಲ್ಲಿ ಮನೆಯಂದರ ಮೇಲೆ ಉರುಳಿದ ಮರ : ಮನೆ ಜಖಂ-ಅಪಾರ ಹಾನಿ

ಜೋಯಿಡಾ : ತಾಲ್ಲೂಕಿನ ಜೋಯಿಡಾ ಗ್ರಾಮ ಪಂಚಾಯ್ತು ವ್ಯಾಪ್ತಿಯಲ್ಲಿ ಬರುವ ಮೆಸ್ತಬಿರೋಡಾದಲ್ಲಿ ಮನೆಯೊಂದರ ಮೇಲೆ ಬೃಹತ್ ಗಾತ್ರದ ಮರ ಬಿದ್ದು ಮನೆ ಜಖಂ ಗೊಮಡ ಘಟನೆ ಇಂದು ಶನಿವಾರ ಬೆಳಿಗ್ಗೆ ನಡೆದಿದೆ.

ಸೋಮುಗೌಡ ಎಂಬವರ ಮನೆ ಮೇಲೆ ಮರ ಬಿದ್ದಿದ್ದು, ಮನೆ ಜಕಂಗೊಂಡು ಲಕ್ಷಾಂತರ ರೂಪಾತಿ ನಷ್ಟವಾಗಿದೆ. ತಾಲ್ಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಎಡೆಬಿಡದೇ ಮಳೆ ಸುರಿಯುತ್ತಿದ್ದು, ಇತ್ತ ಗಾಳಿಯೂ ರಭಸವಾಗಿ ಬೀಸತೊಡಗಿದೆ. ರಭಸವಾದ ಗಾಳಿ ಮಳೆಗೆ ಮರ ಬಿದ್ದು ಈ ದುರ್ಘಟನೆ ಸಂಭವಿಸಿದೆ. ಬಡವರಾದ ಸೋಮುಗೌಡ ಅವರು ಮನೆ ಹಾನಿಯಿಂದ ತೀವ್ರ ನೊಂದಿದ್ದು, ಈ ಬಗ್ಗೆ ಗ್ರಾಮ ಪಂಚಾಯ್ತು ಹಾಗೂ ತಾಲ್ಲೂಕಾಡಳಿತ ಸೂಕ್ತ ರೀತಿಯ ಪರಿಹಾರವನ್ನು ನೀಡುವ ನಿಟ್ಟಿನಲ್ಲಿ ಮುಂದಾಗಬೇಕಾಗಿದೆ.