ಇತಿಹಾಸ ನಮಗೆಲ್ಲರ ಬದುಕಿಗೆ ಮಾರ್ಗದರ್ಶಿ : ಡಾ.ಬಿ.ಎಸ್.ಅಕ್ಕಿ ಅಭಿಮತ

ಹಳಿಯಾಳ : ನಮ್ಮ ದೇಶದ ಇತಿಹಾಸ ವೈಶಿಷ್ಟ್ಯ ಪೂರ್ಣವಾಗಿದೆ. ವೈವಿಧ್ಯಮಯವಾದ ಇತಿಹಾಸವನ್ನು ನಮ್ಮ ದೇಶ ಹೊಂದಿದೆ.  ಜಗತ್ತು ಪರಿವರ್ತನೆಯ ಹಾದಿಯಲ್ಲಿ ಸಾಗಬೇಕಾದರೆ ಅದಕ್ಕೆ ಇತಿಹಾಸವೇ ಮುನ್ನುಡಿ. ಈ ನಿಟ್ಟಿನಲ್ಲಿ ಇತಿಹಾಸ ನಮ್ಮೆಲ್ಲರ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದು ದಾಂಡೇಲಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಂಶೋಧಕರು ಆಗಿರುವ ಡಾ. ಬಿ.ಎಸ್ ಅಕ್ಕಿ ಅವರು ಹೇಳಿದರು.

ಅವರು ಹಳಿಯಾಳ ತಾಲೂಕಿನ ಹವಗಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಇತಿಹಾಸ ಮತ್ತು ವಾಸ್ತುಶಿಲ್ಪದ ಕುರಿತಂತೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಜಗತ್ತಿಗೆ ವಾಸ್ತುಶಿಲ್ಪದ ಚಿತ್ರಣವನ್ನು ತೆರೆದುಕೊಟ್ಟ ದೇಶ ನಮ್ಮದು. ಅಂತಹ ಮನೋಜ್ಞವಾದ ಮತ್ತು ಅದ್ಭುತವಾದ ವಾಸ್ತುಶಿಲ್ಪಗಳು ನಮ್ಮ ದೇಶದಲ್ಲಿದೆ. ವಿದ್ಯಾರ್ಥಿ ದೆಸೆಯಲ್ಲಿ ಇತಿಹಾಸ ಮತ್ತು ವಾಸ್ತುಶಿಲ್ಪದ ಬಗ್ಗೆ ಅರಿವನ್ನು ಹೊಂದಿರಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಡಾ.ಚಂದ್ರಶೇಖರ ಲಮಾಣಿ ವಹಿಸಿದ್ದರು. ವೇದಿಕೆಯಲ್ಲಿ ಐಕ್ಯೂಎಸಿ  ಸಂಯೋಜಕರಾದ ಡಾ .ಸಂಗೀತಾ ಕಟ್ಟಿಮನಿ, ಉಪನ್ಯಾಸಕಿ ಅನ್ನಪೂರ್ಣಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು

ವಿಠಲ್ ಕಿತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅತ್ರೀಜ್ ನಾಯ್ಕ ವಂದಿಸಿದರು.