ಮುಂಡಗೋಡ: ರಾಜ್ಯದ ವಿವಿಧ ಜಿಲ್ಲೆಯಲ್ಲಿ ಹಿಂದೂ ಬಡ ಯುವಕರು ಹತ್ಯೆ ಆಗುತ್ತಿದ್ದು ಪಕ್ಷಕ್ಕಾಗಿ ರಕ್ತ ಹರಿಸುತ್ತಿದ್ದಾರೆ. ನಮ್ಮದೇ ಸರಕಾರದಲ್ಲಿ ಅವರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ. ಘಟನೆಯಿಂದ ಬೇಸತ್ತು ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ವೀಣಾ ಬಸವರಾಜ್ ಓಶಿಮಠ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹರೆಯದ ಬಡ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲಾಗುತ್ತಿದೆ. ಮುಂದಿನ ದಿನನಲ್ಲಿ ಮಹಿಳೆಯರಿಗೂ ಇಂತಹ ಪರಿಸ್ಥಿತಿ ಬರಬಹುದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಈಗಾಗಲೇ ರಾಜ್ಯದ ಹಾಗೂ ಜಿಲ್ಲೆಯ ಬಿಜೆಪಿಯ ಯುವ ಮೊರ್ಚಾದವರು ರಾಜೀನಾಮೆ ನೀಡುತ್ತಿದ್ದಾರೆ. ಹತ್ಯೆಯನ್ನು ಖಂಡಿಸಿ ಮುಂದೆ ಹೀಗಾದಂತೆ ರಾಜ್ಯ ಬಿಜೆಪಿ ಸರ್ಕಾರ ಮೇಲೆ ಒತ್ತಡ ಹೇರಲು ನಾನೂ ಕೂಡಾ ರಾಜೀನಾಮೆ ನೀಡುತ್ತಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾಸ್ ವಿತರಕ ಸಂಘದ ಅಧ್ಯಕ್ಷ ಬಸವರಾಜ್ ಓಶಿಮಠ, ದಲಿತ ಮುಖಂಡ ಚಿದಾನಂದ ಹರಿಜನ ಉಪಸ್ಥಿತರಿದ್ದರು.