ದಾಂಡೇಲಿ: ಕುವೆಂಪು ತಮ್ಮ ಕಾವ್ಯ, ಮಹಾಕಾವ್ಯ, ಕಾದಂಬರಿಗಳು, ನಾಟಕಗಳು ಹಾಗೂ ವಿಚಾರ ಸಾಹಿತ್ಯದಲ್ಲಿ ವಿಶ್ವ ಮಾನವ ಸಂದೇಶವನ್ನು ಸಾರಿದ್ದಾರೆ. ಮನುಷ್ಯರು ವಿಶ್ವಮಾನರಾಗಿ ಹುಟ್ಟುತ್ತಾರೆ ಆದರೆ ಅಲ್ಪಮಾನವರಾಗಿ ಬೆಳೆಯತೊಡಗುತ್ತಾರೆ. ಜಾತಿ, ಮತ, ಪಂಥ, ವರ್ಣ, ಲಿಂಗಗಳ ಸಂಕೋಲೆಯಲ್ಲಿ ಬಂಧಿತರಾಗುತ್ತಾರೆ. ಈ ಬಂಧನಗಳನ್ನು ಮೀರಿ ವಿಶ್ವಮಾನವರಾಗಿ ಬೆಳೆಯಬೇಕು ಎಂದು ಕುವೆಂಪು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿದ್ದಾರೆ ಎಂದು ಜೋಯಿಡಾದ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಪದವಿಪೂರ್ವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರು ಹಾಗೂ ಲೇಖಕರಾದ ಪ್ರವೀಣ ನಾಯಕ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಅಂಬೇವಾಡಿಯ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಡಿ ಹಮ್ಮಿಕೊಂಡಿದ್ದ ಕುವೆಂಪು-ಬದುಕು, ಬರಹ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ. ಎಂ.ಡಿ.ಒಕ್ಕುಂದ ಅವರು ಅಧ್ಯಕ್ಷತೆ ವಹಿಸಿದ್ದರು. ಗೌರವ ಅತಿಥಿಗಳಾಗಿ ಡಾ. ಬಿ.ಎನ್.ಅಕ್ಕಿ ಹಾಗೂ ಡಾ. ನಾಸೀರಅಹ್ಮದ ಜಂಗೂಭಾಯಿಯವರು ಉಪ್ಥಿತರಿದ್ದರು.
ವೇದಿಕೆಯಲ್ಲಿ ಪ್ರಾಧ್ಯಾಪಕರುಗಳಾದ ವಿನಯಾ ಜಿ. ನಾಯಕ, ಉಷಾ ನಾಯಕ ಮತ್ತು ವಿರೇಶ ಉಪಸ್ಥಿತರಿದ್ದರು.