ಶಿಕ್ಷಕ ರತ್ನ ರಾಷ್ಟ್ರೀಯ ಪ್ರಶಸ್ತಿ’ಗೆ  ಆಯ್ಕೆಯಾದ ಕನ್ನಡ ಶಿಕ್ಷಕ ವಿಷ್ಣು ನಾಯ್ಕ

ಸಿದ್ದಾಪುರ: ನಾಡಿನ ಸಮಾಚಾರ ಸೇವಾ ಸಂಘ ಹಾಗೂ ಬೆಳಗಾವಿಯ ಸಮಾಚಾರ ದಿನಪತ್ರಿಕೆ ನೀಡುವ ೨೦೨೩ನೇ ಸಾಲಿನ  ‘ಶಿಕ್ಷಣ ರತ್ನ ರಾಷ್ಟ್ರೀಯ ಪ್ರಶಸ್ತಿ’ಗೆ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಜಿಡ್ಡಿಯ ಸರ್ಕಾರಿ ಪ್ರೌಢಶಾಲೆಯ ಕನ್ನಡ ಶಿಕ್ಷಕ ವಿಷ್ಣು ನಾಯ್ಕ ಆಯ್ಕೆಯಾಗಿದ್ದಾರೆ.
ಶಿಕ್ಷಕರಾಗಿ ಬೋಧನೆ ಮತ್ತು ಫಲಿತಾಶದಲ್ಲಿ ನಿರಂತರ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಇತರ ಸಾಧನೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶಕ್ಕಾಗಿ ಸತತ ನಾಲ್ಕು ವರ್ಷ ಅಪರ ಆಯುಕ್ತರ ಕಾರ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಧಾರವಾಡ ಇವರು ನೀಡುವ ” ಶೈಕ್ಷಣಿಕ ಪರಿಶ್ರಮ ಹಿರಿಮೆಯ ಗೌರವ ಪುರಸ್ಕಾರ ಪ್ರಶಸ್ತಿ’ಗೆ ಭಾಜನರಾಗಿರುವ ಇವರು
ವಿದ್ಯಾರ್ಥಿಗಳಿಗೆ ಸಾಹಿತ್ಯಿಕ ಮಾರ್ಗದರ್ಶನ ನೀಡುತ್ತಿರುವುದರ ಜೊತೆಗೆ ಡಿ.ಎಸ್.ಇ.ಆರ್.ಟಿ ಬೆಂಗಳೂರು ಇವರ ವತಿಯಿಂದ ಸಿ.ಟಿ.ಇ ಬೆಳಗಾವಿಯಲ್ಲಿ ನಡೆದ ಇ- ಕಂಟೆಂಟ್ ಆಧಾರಿತ ವಿಡಿಯೋ ಪಾಠಗಳಿಗೆ ಕನ್ನಡ ಭಾಷಾ ವಿಷಯದ ಸಂಪನ್ಮೂಲ ವ್ಯಕ್ತಿಯಾಗಿ ಶಿರಸಿ ಜಿಲ್ಲಾ ಮಟ್ಟದ ತರಬೇತಿಗಳಲ್ಲಿ  ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕವನ, ಲೇಖನಗಳು ರಾಜ್ಯ ಮತ್ತು ಸ್ಥಳೀಯ ಮಟ್ಟದ ದಿನಪತ್ರಿಕೆ, ವಾರಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಸಾಹಿತ್ಯಿಕವಾಗಿ ರಾಜ್ಯಮಟ್ಟದ ಹಲವಾರು ಬಹುಮಾನಗಳಿಗೆ, ರಾಜ್ಯ ಮಟ್ಟದ ಪ್ರಶಸ್ತಿಗೆ ಇವರು ಪಾತ್ರರಾಗಿದ್ದಾರೆ. ಜುಲೈ 29ರಂದು ಧಾರವಾಡದ ರಂಗಾಯಣ ಸಾಂಸ್ಕೃತಿಕ ಸಮುಚ್ಚಯ ಸಭಾಭವನದಲ್ಲಿ ನಡೆಯಲಿರುವ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.