ಅಮೇಝಾನ್​; ಆರ್ಡರ್ ಮಾಡಿದ್ದು ರೂ 90ಸಾವಿರ ಕ್ಯಾಮೆರಾ ಲೆನ್ಸ್; ತಲುಪಿದ್ದು ಕಿನೋವಾ ಬೀಜಗಳು

ಪ್ರತೀ ದಿನ ಲೆಕ್ಕವಿಲ್ಲದಷ್ಟು ಆನ್​ಲೈನ್​ ಶಾಪಿಂಗ್​ನ ಅವಾಂತರಗಳು ನಡೆಯುತ್ತಿರುತ್ತವೆ. ಆರ್ಡರ್ ಮಾಡುವುದೊಂದು ತಲುಪುವುದೊಂದು. ಇದೀಗ ಅಮೇಝಾನ್​ನಿಂದ ರೂ. 90,000 ಕ್ಯಾಮೆರಾ ಲೆನ್ಸ್​ ಅನ್ನು ಆರ್ಡರ್​ ಮಾಡಿದ ಒಬ್ಬರಿಗೆ ಲೆನ್ಸ್ ಬದಲಾಗಿ ಕಿನೋವಾ ಬೀಜಗಳು ತಲುಪಿವೆ. ಅರುಣಕುಮಾರ್ ಮೆಹೆರ್​ ಎಂಬುವವರು ತಮ್ಮ ಅನುಭವವನ್ನು ಟ್ವೀಟ್ ಮಾಡಿದ್ದಾರೆ, ‘ಅಮೇಝಾನ್​ನಿಂದ 90K INR ಕ್ಯಾಮೆರಾ ಲೆನ್ಸ್ ಆರ್ಡರ್ ಮಾಡಿದೆ. ಆದರೆ ಲೆನ್ಸ್​ ಬಾಕ್ಸಿನೊಳಗೆ ಕಿನೋವಾ ಬೀಜಗಳ ​ಪ್ಯಾಕೆಟ್ ಕಳುಹಿಸಲಾಗಿದೆ. ಅಮೇಝಾನ್ ಮತ್ತು ಎಪ್ಪಾರಿಯೋ ರೀಟೇಲ್​ನ ದೊಡ್ಡ ಸ್ಕ್ಯಾಮ್​ ಇದು.’

ಅರುಣಕುಮಾರ್​ ಜು. 5ರಂದು ಅಮೇಝಾನ್​ನಿಂದ ಸಿಗ್ಮಾ 24/70 F 2.8 ಲೆನ್ಸ್​ ಆರ್ಡರ್​ ಮಾಡಿದ್ದರು. ಆದ ಸಮಸ್ಯೆಯನ್ನು ಅವರು ಅಮೇಝಾನ್​ಗೆ ಟ್ಯಾಗ್​ ಮಾಡಿ ಟ್ವೀಟ್ ಮಾಡಿದ್ದರು. ಅಮೇಝಾನ್​ ಈ ಬಗ್ಗೆ ತನಿಖೆ ನಡೆಸುತ್ತಿದೆ ಪ್ರತಿಕ್ರಿಯಿಸಿದೆಯಾದರೂ, ಅರುಣಕುಮಾರ್, ಲೆನ್ಸ್​ ಕಳುಹಿಸಿ ಇಲ್ಲವೆ ಹಣವನ್ನು ಮರುಪಾವತಿಸಿ ಎಂದು ಮರುಟ್ವೀಟ್ ಮಾಡಿದ್ದಾರೆ. ಜು.7ರಂದು ಮಾಡಿದ ಈ ಟ್ವೀಟ್ ಅನ್ನು 1.3 ಲಕ್ಷಕ್ಕಿಂತಲೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸುಮಾರು 300 ಜನರು ರೀಟ್ವೀಟ್ ಮಾಡಿದ್ದಾರೆ.

ಅನೇಕರು ತಮ್ಮ ಇಂಥ ಅನುಭವಗಳನ್ನು ಈ ಟ್ವೀಟ್​ನಡಿ ಹಂಚಿಕೊಂಡಿದ್ದಾರೆ. ಕೆಲವರು ಅಂಗಡಿಗೆ ಹೋಗಿ ಖರೀದಿಸುವುದು ಉತ್ತಮ ಎಂದಿದ್ದಾರೆ. ಕಳೆದ ವರ್ಷ ಸಿಗ್ಮಾ 150-600 ಲೆನ್ಸ್ ಆರ್ಡರ್ ಮಾಡಿದ್ದೆ, ನನಗೆ ಹೊಲಿಗೆ ಯಂತ್ರ ಕಳಿಸಿದ್ದರು ಎಂದಿದ್ದಾರೆ ಒಬ್ಬರು. ಇದೇನು ಹೊಸ ಸಮಸ್ಯೆಯಲ್ಲ, ನಾನು ಅನೇಕ ಬಾರಿ ಇದನ್ನು ಎದುರಿಸಿದ್ದೇನೆ. ಕೆಲವೊಮ್ಮೆ ಸಮಸ್ಯೆಗಳು ಪರಿಹಾರಗೊಂಡಿವೆ, ಇನ್ನೂ ಕೆಲವು ಹಾಗೇ ಇವೆ. ಆದ್ದರಿಂದ ಡೆಲಿವರಿ ಏಜೆಂಟರ್ ಮುಂದೆಯೇ ಬಾಕ್ಸ್​ ತೆರೆದು ನಂತರ ಅದನ್ನು ತೆಗೆದುಕೊಳ್ಳುತ್ತೇನೆ ಎಂದಿದ್ಧಾರೆ ಇನ್ನೊಬ್ಬರು.