ಸಿದ್ದಾಪುರ : ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯ ಕ್ಕೆ ಶ್ಲಾಘನೆ.

ಸಿದ್ದಾಪುರ : ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಐಗೋಡನಲ್ಲಿ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಪೆನ್ನು ಪೆನ್ಸಿಲ್ ಪರಿಕರವಿತರಣೆ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು
ಸಂಘದ ಅಧ್ಯಕ್ಷ ಸೀತಾರಾಮ ಕೆ ಬೋರಕರ ವಿದ್ಯಾರ್ಥಿಗಳ ಉದ್ದೇಶಿಸಿ ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳನ್ನು ಆಯ್ಕೆ ಮಾಡಿ ಸಂಘಟನೆಯ ವತಿಯಿಂದ ವಿದ್ಯಾರ್ಥಿಗಳಿಗೆ ಪಠ್ಯ ಪರಿಕರ ವಿತರಿಸಲು ಸಂಘದ ಪದಾಧಿಕಾರಿಗಳ ಸೂಚನೆ ಯಂತೆ 2023ನೇಸಾಲಿನಲ್ಲಿಎಸ.ಎಸ್.ಎಲ್. ಸಿ.ಯಲ್ಲಿ ರಾಜ್ಯಕ್ಕೆ 8ನೇ ರೇಂಕ್ ಸಾದನೆ ಮಾಡಿದ ಸಂದೇಶ ಲಕ್ಷ್ಮಣ ಬೋರಕರ ಕಲಿತ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪರಿಕರ ವಿತರಣೆ ಮಾಡುವ ಮೂಲಕ ವಿದ್ಯಾರ್ಥಿ ಅವನಂತೆ ಉತ್ತಮ ಸಾಧನೆ ಮಾಡಲು ಕರೆನೀಡಿದರು. ಮಂಜುನಾಥ ರಾಯ್ಕರ್, ಮುಖ್ಯೋಪಧ್ಯಾಪಕರು ಸಿದ್ದಾಪುರ ತಾಲೂಕಿನ ತೀರಾ ಹಿಂದುಳಿದ ಪ್ರದೇಶದ ತಮ್ಮ ಶಾಲೆಯನ್ನು ಆಯ್ಕೆ ಮಾಡಿದ್ದಕ್ಕೆ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಎಲ್ಲಾ ಸಮಾಜದ ವಿದ್ಯಾರ್ಥಿಗಳಿಗೆ ಪರಿಕರಗಳನ್ನು ನೀಡಿ ಮಾದರಿ ಕಾರ್ಯಕ್ರಮ ಮಾಡಿದ್ದು ಧನ್ಯವಾದಗಳನ್ನು ಅರ್ಪಿಸಿದರು.
ಕಾಯ೯ಕ್ರಮ ನಂದನ ಪಿ.ಬೋರಕರ ನಿವ೯ಹಣೆ ಮಾಡಿದರು , ಕಾರ್ಯದರ್ಶಿ ಕಮಲಾಕರ ಎಸ್.ಬೋರಕರ ಸಂಘದ ಕಾಯ೯ಗಳನ್ನು
ತಿಳಿಸಿದರು.

ನಮ್ಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕ್ರೀಡೆ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಯಾವುದೇ ಸಂಘಟನೆ ಗುರುತಿಸಿ ಸಹಾಯ ಹಸ್ತ ನೀಡಿಲ್ಲ , ಆದರೆ ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ನಮ್ಮಲ್ಲಿ ಓದುವ ಎಲ್ಲರನ್ನು ಸೇರಿಸಿ ಮಕ್ಕಳಿಗೆ ಲೇಖನ ನೀಡಿದ್ದಕ್ಕೆ ಶಿಕ್ಷಕರು ಧನ್ಯವಾದಗಳು ‌ ತಿಳಿಸಿದರು. ಎಸ್.ಡಿ.ಎಮ್.ಸಿ. ಸದಸ್ಯ ಮಹೇಶ್ ಟಿ.ನಾಯ್ಕ , ಸಂಘದ ಸದ‌ಸ್ಯ ಮಾರುತಿಎನ್ .ಬೋರಕರ , ಲಕ್ಷ್ಮಣ ಡಿ .ಬೋರಕರ, ಶ್ರೀರಂಗ ಎಮ್. ಮತ್ತಿತರರು ಉಪಸ್ಥಿತರಿದ್ದರು