ಭಟ್ಕಳದ ರಿಬ್ಕೋ ಮಾಲೀಕನ ಮನೆ ಕಳ್ಳತನ ಪ್ರಕರಣ – ಇಬ್ಬರು ಆರೋಪಿಗಳ ಬಂಧನ – 12 ಲಕ್ಷ ರೂ ಮೌಲ್ಯದ ವಸ್ತುಗಳ ಜಪ್ತಿ

ಭಟ್ಕಳ: ತಾಲೂಕಿನ ಪ್ರತಿಷ್ಠಿತ ರಿಬ್ಕೋ ಸಂಸ್ಥೆಯ ಮಾಲೀಕನ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಮೊಹಮ್ಮದ ಸಾಧಿಕ್  ಅಲ್ಲಾಬಕ್ಷ ಹಾಗೂ ಮುಜಮ್ಮಿಲ್  ರಹಮತುಲ್ಲಾ ಶೇಖ್ ಎಂದು ಗುರುತಿಸಲಾಗಿದೆ.‌ ಬಂಧಿತರಿಂದ ಒಟ್ಟು 12 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇವರು ಕಳೆದ ಜೂನ್ 22 ರಾತ್ರಿ ವೆಂಕಟಾಪುರದಲ್ಲಿರುವ ರಿಬ್ಕೋ ಸಂಸ್ಥೆಯ ಮಾಲೀಕನ  ಮನೆಯ ಮುಂದಿನ ಬಾಗಿಲಿನ ಬೀಗ ಮುರಿದು ಕೋಣೆಯೊಳಗಿನ ಕಪಾಟನ ಒಳಗೆ ಇಟ್ಟಿದ್ದ ಲಾಕರ್ ಪೆಟ್ಟಗೆ ಒಡೆದು ಒಟ್ಟೂ 14,50,000 ರೂಪಾಯಿ  ನಗದು ಹಣ, ಬಂಗಾರದ ಆಭರಣ ವಿದೇಶಿ ಕರೆನ್ಸಿಗಳು ಹಾಗೂ ಒಂದು ವಾಚನ್ನು ಲಾಕರ್ ಸಮೇತ ಕಳುವು ಮಾಡಿಕೊಂಡು ಪರಾರಿಯಾಗಿದ್ದರು.

ಬಳಿಕ ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಜುಲೈ 10 ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…

ಆರೋಪಿತರ ಪತ್ತೆಯ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ವಿಷ್ಣುವರ್ಧನ, ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಸಿ.ಐ ಜಯಕುಮಾರ, ಡಿವೈಎಸ್ಪಿ ಶ್ರೀಕಾಂತ.ಕೆ ರವರ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ಚಂದನ ಗೋಪಾಲ.ವಿ,   ಪಿ.ಎಸ್.ಐ ಗಳಾದ  ಶ್ರೀಧರ ನಾಯ್ಕ , ಮಯೂರ ಪಟ್ಟಣ ಶೆಟ್ಟಿ ಸಿಬ್ಬಂದಿಗಳಾದ  ಮಂಜುನಾಥ ಗೊಂಡ, ದೀಪಕ್ , ವಿನಾಯಕ ಪಾಟೀಲ್,  ಈರಣ್ಣಾ ಪೂಜಾರಿ, ನಿಂಗನಗೌಡ ಪಾಟೀಲ್ , ವಿನೋದ ಕುಮಾರ ಜ.ಬಿ, ಚಾಲಕ ಸಿಬ್ಬಂದಿ  ದೇವರಾಜ ಮೊಗೇರ, ಜಿಲ್ಲಾ ಟೆಕ್ನಿಕಲ್ ಸೆಲ್ ಸಿಬ್ಬಂದಿಗಳಾದ  ಉದಯ ಗುನಗಾ , ರಮೇಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು…