ಕರಾವಳಿಯಲ್ಲಿ ಐಆರ್‌ಬಿ ಅಧಿಕಾರಿಗಳ ಅವೈಜ್ಞಾನಿಕ ಕಾಮಗಾರಿಯಿಂದ ಆಗುತ್ತಿರೋ ಅನಾಹುತ ಒಂದೆರಡಲ್ಲ.. ದಿನೇ ದಿನೇ ಸಾವು ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಮುರುಡೇಶ್ವರ್ ಸಮೀಪ ಬೈಕ್ ಸವಾರನೊಬ್ಬ ಬಲಿಯಾಗಿದ್ದಾನೆ…
ಹೊಟ್ಟೇಗೇನು ಅನ್ನ ತಿಂತೀರಾ.. ಇಲ್ಲಾ ಸಗಣಿ ತಿಂತೀರಾ… ಇದು ಉಸ್ತವಾರಿ ಸಚಿವರು ಅವೈಜ್ಷಾನಿಕ ಕಾಮಗಾರಿ ನಡೆಸಿದ ಐಆರ್‌ಬಿ ಅಧಿಕಾರಿಗಳನ್ನು ತರಾಟೆ ತಗೆದುಕೊಂಡ ರೀತಿ ಇದು. ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜಲಪ್ರವಾಹವೇ ಉಂಟಾಗಿತ್ತು…
ಆದ್ರೀಗ ಐಆರ್‌ಬಿ ಅಧಿಕಾರಿಗಳ ಅವೈಜ್ಷಾನಿಕ ಕಾಮಗಾರಿಗೆ ಈ ಸ್ಪೂರದ್ರೂಪಿ ಯುವಕ ಬಲಿಯಾಗಿದ್ದಾನೆ.
ಈತನ ಹೆಸರು ಶಿವು ನಾಗೇಶ್ ನಾಯ್ಕ.. ಮಂಕಿ ನಿವಾಸಿ.. ಸಿವಿಲ್ ಇಂಜನಿಯರಿಂಗ್ ಮುಗಿಸಿ ಕೆಲಸ ಮಾಡ್ತಿದ್ದ. ಸೋಮವಾರ ರಾತ್ರಿ ಮಂಕಿಯಿಂದ ಭಟ್ಕಳಕ್ಕೆ ಬೈಕ್‌ನಲ್ಲಿ ತೆರಳ್ತಿದ್ದ. ಈ ವೇಳೆ ಮುರುಡೇಶ್ವರ ಸಮೀಪದ ಬಸ್ತಿ ಬಳಿ ಬೈಕ್‌ನಲ್ಲಿ ಬರ್ತಿದ್ದ ಶಿವು, ಐಆರ್‌ಬಿ ಎಡವಟ್ಟಿನಿಂದ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಪ್ರಾಣ ಬಿಟ್ಟಿದ್ದಾನೆ…
ಬಸ್ತಿ ಬಳಿ ಐಆರ್‌ಬಿ ಅಂಡರ್ ಕನ್ಸಟ್ರಕ್ಷನ್ ನಡೆಸುತ್ತಿದೆ. ಹೀಗಾಗಿ ಇಲ್ಲಿ ಡಬಲ್ ರೋಡ್ ಅನ್ನು ಸಿಂಗಲ್ ರೋಡ್‌ಗೆ ಡೈವರ್ಶನ್ ಮಾಡಲು, ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ಆದ್ರೆ ಇದನ್ನು ಕಾಣದ ಶಿವು ಬ್ಯಾರಿಕೇಡ್‌ಗೆ ಬಂದು ಡಿಕ್ಕಿ ಹೊಡೆದಿದ್ದಾನೆ. ಇಲ್ಲಿ ಶಿವು ತಪ್ಪೇನು ಇರಲಿಲ್ಲ.. ಬಹುತೇಕ ಯಾರೇ ಆದ್ರೂ ಇಲ್ಲಿ ಬಂದ್ರೆ, ದುಕ್ಕಿ ತೋಚದೇ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೀತಾರೆ.. ಶಿವಿಗೆ ಆಗಿದ್ದು ಇದೇ…
ಡಿಕ್ಕಿ ಹೊಡೆದ ರಭಸಕ್ಕೆ ಶಿವು ೨೦ರಿಂದ ೨೫ ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದಾನೆ. ಪರಿಣಾಮ ಶಿವು ತಲೆಗೆ ಗಂಭೀರವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಆರ್‌ಬಿ ಅವೈಜ್ಞಾನಿಕ ಕಾಮಗಾರಿಗೆ ಜಿಲ್ಲೆಯಲ್ಲಿ ಇನ್ನೆಷ್ಟು ಬಲಿಯಾಗಬೇಕು ಅಂತ ಜಿಲ್ಲೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ…
ಉದಯ ನಾಯ್ಕ, ನುಡಿ ಸಿರಿ ನ್ಯೂಸ್, ಭಟ್ಕಳ