13 ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ; ಜಿಲ್ಲಾಸ್ಪತ್ರೆಗೆ ದಾಖಲು

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ತೊರೆಕೋಲಮ್ಮನಹಳ್ಳಿಯ ಮಂಜುಳಾ-ಸಿದ್ದೇಶ್ ದಂಪತಿಯ 13ದಿನದ ನವಜಾತ ಶಿಶುವಿನ ಮೇಲೆ ಕೋತಿ ದಾಳಿ ಮಾಡಿದೆ. ಈ ವೇಳೆ ಮಗುವಿನ ಹಣೆ, ತಲೆ ಭಾಗದಲ್ಲಿ ಗಾಯವಾಗಿದ್ದು, ಗಾಬರಿಗೊಂಡ ತಾಯಿ ಜೋರಾಗಿ ಕೂಗಿದಾಗ ಕೋತಿ ಓಡಿ ಹೋಗಿದೆ. ಕೂಡಲೇ ಗಾಯಗೊಂಡ ಮಗುವನ್ನ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಕಳೆದ ಒಂದು ವಾರದಿಂದ ಈ ಕೋತಿ ಗ್ರಾಮದಲ್ಲಿ ಕಾಣಿಸಿಕೊಂಡಿತ್ತು. ಇದೀಗ ಏಕಾಏಕಿ ಮನೆಗೆ ನುಗ್ಗಿ ಮಗುವಿನ ಮೇಲೆ ದಾಳಿ ಮಾಡಿದ್ದು, ಕೋತಿ ಸೆರೆಗೆ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರ ಆಗ್ರಹಿಸಿದ್ದಾರೆ.