ಸಿದ್ದಾಪುರ : ಭೂ ದಾಖಲೆಯ ವಿಭಾಗದಲ್ಲಿ ಅಧಿಕಾರಿಯೋರ್ವ ಜನರಿಂದ ಹಣ ಪಡೆದು ಕೆಲಸವೂ ಮಾಡದೇ ಬಂದ ಬಡ ಜನರಿಗೆ ತೊಂದರೆ ನೀಡುತ್ತಾನೆ ಎಂದು ಸಾರ್ವಜನಿಕರು ಆರೋಪಿಸಿದ್ದು ಆತನು ಲಂಚ ಪಡೆದಿರುವುದನ್ನು ತಹಸೀಲ್ದಾರ್ ಎದುರು ಒಪ್ಪಿಕೊಂಡಿದ್ದಾನೆ ಆತನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿ ಜೆಡಿಎಸ್ ರಾಜ್ಯ ಮುಖಂಡ ಇಲಿಯಾಸ್ ಹಾಳದಕಟ್ಟಾ ತಹಸೀಲ್ದಾರ್ ಗೆ ಮನವಿ ನೀಡಿದರು
ಬಿಜಾಪುರ ಮೂಲದ ಝಿಯಾವುದ್ದೀನ್ ಎಂಬುವವರು ಭೂ ದಾಖಲೆಯ ವಿಭಾಗದಲ್ಲಿ ಸುಮಾರು ಐದು ವರ್ಷಗಳಿಂದ ಭೂ ದಾಖಲೆ ಸರ್ವೆ ಅಧಿಕಾರಿಯಾಗಿದ್ದು ಈತನು ಕೆಲಸ ಮಾಡಿಕೊಡುತ್ತೇನೆಂದು ಜನರಿಂದ ಹಣ ಪಡೆದು ಕೆಲಸವೂ ಮಾಡದೇ ಬಂದ ಬಡ ಜನರಿಗೆ ತೊಂದರೆ ನೀಡುತ್ತಿದ್ದನು. ಹಾಗೂ ಆತನು ಜನರಿಗೆ ಬೆದರಿಕೆ ಒಡ್ಡುತ್ತಿದ್ದು ಜುಲೈ 13 ರ ಗುರುವಾರದಂದು ಅವನ ವಿರುದ್ಧ ಭ್ರಷ್ಟಾಚಾರ ಖಂಡಿಸಿ ಸಾರ್ವಜನಿಕವಾಗಿ ಪ್ರತಿಭಟನೆ ಮಾಡಿ ಆತನನ್ನು ತಹಸೀಲ್ದಾರ ಕಾರ್ಯಾಲಯ ಕ್ಕೆ ಕರೆಯಿಸಿ ಕೇಳಿದಾಗ ಆತನ ಜನರಿಂದ ಪಡೆದುಕೊಂಡಿದ್ದು ಹೌದು ಎಂದು ಒಪ್ಪಿಕೊಂಡಿರುತ್ತಾನೆ. ಮೂರು ದಿವಸ ಕಳೆದರೂ ಇನ್ನು ವರೆಗೂ ಅವನ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಈ ತರ ವರ್ತನೆ ಮಾಡುವ ಭ್ರಷ್ಟ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ
ಈ ಸಂದರ್ಭದಲ್ಲಿ ಕರವೇ ಬಳಗದ ಅನಿಲ್ ಕೊಠರಿ, ಕೃಷ್ಣಮೂರ್ತಿ, ಮೋಹನ, ಪಾಂಡುರಂಗ ಚೆನ್ಮಾವ್ ಮುಂತಾದವರು ಉಪಸ್ಥಿತರಿದ್ದರು.