ಸಿದ್ದಾಪುರ : ಬೋರಕರ ಬಂಧುಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತಾಲೂಕಿನ ಕಾನಗೋಡ ನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಪೆನ್ನು ಪೆನ್ಸಿಲ್ ಪರಿಕರ ಹಂಚಿ ಮತ್ತು ವನಮಹೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಎಸ್.ಡಿ.ಎಮ್.ಸಿ. ಅಧ್ಯಕ್ಷ ನಾಗರಾಜ ನಾಯ್ಕ ಸಂಘದ ಪ್ರಥಮ ಕಾಯ೯ಕ್ರಮಕ್ಕೆ ತಮ್ಮ ಶಾಲೆಯಲ್ಲಿ ನಡೆಸಿರುವುದಕ್ಕೆ ತುಂಬು ಹೃದಯದಿಂದ ಹರಸಿ ಸಂಘಟನೆಯು ಕಾಯ೯ಕ್ರಮ ಮಾಡಿ
ಉನ್ನತ ಮಟ್ಟದಲ್ಲಿ ಹೆಸರುಗಳಿಸಲಿ ಎಂದು ಶುಭಹಾರೈಸಿದರು .
ಸಂಘಟನೆಯ ಅಧ್ಯಕ್ಷ ಸೀತಾರಾಮ ಕೋಥಾ ಬೋರಕರ
ಸಂಘದ ಧ್ಯೇಯೋದ್ದೇಶಗಳನ್ನು ವಿವರವಾಗಿ ಸಭೆಗೆ ತಿಳಿಸಿದರು. ಕಾಯ೯ಕಲಾಪಕ್ಕೆ ಔಷದಿ ಗಿಡದ ಕುಂಡಕ್ಕೆ
ನೀರು ಹಾಕಿ ಉದ್ಘಾಟಿಸಿದರು. ಸಭಾ ಕಾರ್ಯಕ್ರಮ ನಿವ೯ಹಣೆ ನಂದನ ಪಿ. ಬೋರಕರ ಮಾಡಿದರು.
ಸಂಘದ ಕಾರ್ಯದರ್ಶಿಗಳಾದ ಕಮಲಾಕರ ಸೋಮು ಬೋರಕರರವರು ಸಂಘದ ಕಾಯ೯ಕಲಾಪಗಳ ಕುರಿತು ವಿವರವಾಗಿ ಹೇಳಿದರು, ಶಾಲಾ ಮುಖ್ಯೋಪಾಧ್ಯಾಯ
ನಾಗರಾಜಪ್ಪ ಎಚ್.ರಪರು ಸಂಘಟನೆಯ ಪದಾಧಿಕಾರಿ
ಗಳು ತಮ್ಮ ಶಾಲೆಯಲ್ಲಿ ವನಮಹೋತ್ಸವ ಆಚರಣೆ ಮತ್ತು
ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ಪೆನ್ನು ವಿತರಿಸಲು ಪ್ರಾರಂಭದ ಕಾಯ೯ಕ್ರಮಕ್ಕೆ ಆಯ್ಕೆ ಮಾಡಿದ ಕುರಿತು
ತುಂಬಾ ಸಂತೋಷ ತಂದಿದೆ ಎಂದರು. ಹಾಗೂ ಎಲ್ಲಾ ಬೋರಕರ ಬಂಧುಗಳ ಪದಾಧಿಕಾರಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಶಿಕ್ಷಕರು ಸೇರಿ ವನಮಹೋತ್ಸವ ಆಚರಣೆ
ಮಾಡಲಾಯಿತು. ಕಾಯ೯ಕ್ರಮಕ್ಕೆ ಪುರಂದರ ವಾಮನ ಬೋರಕರ, ವಿಜಯಕುಮಾರ ಖೇಮು ಬೋರಕರ, ಜನಾರ್ದನ ಲಕ್ಷ್ಮಣ ಬೋರಕರ, ಕುಮಾರ ಕೇರಿಯಾ ಬೋರಕರ, ಸುಭಾಶ ಖೇಮು ಬೋರಕರ, ಗೋಪಾಲಕೃಷ್ಣ ಕೋಥಾ ಬೋರಕರ, ಪೂಜಾ ಪ್ರಶಾಂತ ಬೋರಕರ, ಸತ್ಯನಾರಾಯಣ ದಾದು ಬೋರಕರ, ಶ್ರೀ ಮೂರ್ತಿ ಮೋಹನ ಬೋರಕರ, ಅರವಿಂದ ಕೇರಿಯಾ ಬೋರಕರ, ಶ್ರೀರಂಗ ಮಾರುತಿ ಬೋರಕರ, ಮಾರುತಿ ನಾಗು ಬೋರಕರ, ಲಕ್ಷ್ಮಣ ದುರ್ಗ ಬೋರಕರ ಹಾಜರಾಗಿದ್ದರು.