ವಿವಿಧ ಬೇಡಿಕೆ ಈಡೇರಿಸುವಂತೆ ಅಗ್ರಹಿಸಿ ನ್ಯಾಯ ಬೆಲೆ ಅಂಗಡಿ ಮಾಲೀಕರ ಸಂಘದಿಂದ ಮನವಿ

ಸಿದ್ದಾಪುರ : ನ್ಯಾಯ ಬೆಲೆ ಅಂಗಡಿ ಮಾಲೀಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರಿಗೆ ತಾಲೂಕ ನ್ಯಾಯ ಬೆಲೆ ಅಂಗಡಿ ವರ್ತಕರ ಸಂಘದವರು ಮನವಿ ಸಲ್ಲಿಸಿದರು
ಘನ ಸರ್ಕಾರವು ತಮ್ಮ ಪಂಚ ಗ್ಯಾರೆಂಟಿ ಪೈಕಿ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿ ಹೊಂದಿದ ಕಡು ಬಡವರ ಅನ್ನಭಾಗ್ಯ ಯೋಜನೆ ಒಂದಾಗಿರುತ್ತದೆ ತಾವುಗಳು ಸರ್ಕಾರದಿಂದ 10 ಕೆಜಿ ಅಕ್ಕಿ ಪ್ರತಿ ವ್ಯಕ್ತಿಗೆ ನೀಡುವುದಾಗಿ ಆಶ್ವಾಸನೆ ಕೊಟ್ಟಿದ್ದು ಕೇಂದ್ರ ಸರ್ಕಾರದಿಂದ 5 ಕೆಜಿ ರಾಜ್ಯ ಸರ್ಕಾರದಿಂದ 5 ಕೆಜಿ ಎಂದು ಪ್ರಕಟಿಸಿರುತ್ತೀರಿ ಕೇಂದ್ರ ಸರ್ಕಾರದ ಐದು ಕೆಜಿ ಅಕ್ಕಿ ಬಂದಿರುತ್ತದೆ ರಾಜ್ಯ ಸರ್ಕಾರ 5 ಕೆ.ಜಿ ಬದಲು ನಗದು ಹಣ ಜಮಾಪಡಿಸುವ ಯೋಜನೆ ತಂದಿದ್ದು ನ್ಯಾಯಬೆಲೆ ಅಂಗಡಿಯ ವರ್ತಕರ ಸೇವೆಗೆ ಕಲ್ಲು ಹೊಡೆದಂತಾಗಿದೆ ನ್ಯಾಯ ಬೆಲೆ ಅಂಗಡಿಯವರು ಕಮಿಷನ್ ಹಣದಿಂದ ಬದುಕು ಸಾಗಿಸಬೇಕಾಗಿದೆ ನಮಗೆ ಬರಬೇಕಾದ ಕಮಿಷನ್ ಹಣವು ಸಕಾಲಕ್ಕೆ ನೀಡುತ್ತಿಲ್ಲ ಇತರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೊಡುತ್ತಿರುವ ಕಮಿಷನ್ ಹಣವು ಕಡಿಮೆ ಇರುತ್ತದೆ ಜನಾನುರಾಗಿಗಳು ಬಡವರ ಪರವಾಗಿಯೂ ಇರುವ ಘನ ಸರ್ಕಾರ ನ್ಯಾಯಬೆಲೆ ಅಂಗಡಿಯವರ ಪರವಾಗಿಯೂ ನಿಂತು ನಮಗೆ ಬರಬೇಕಾದ ಈವರೆಗಿನ ಕಮಿಷನ್ ಹಣ ನೀಡಬೇಕು ಅಕ್ಕಿಯ ಬದಲು ಹಣ ನೀಡುವುದನ್ನು ನಿಲ್ಲಿಸಿ ಅಕ್ಕಿ ನೀಡಬೇಕು ಇಲ್ಲವೇ ಸದರಿ ಆದಕ್ಕೆ ತಗಲುವ ಕಮಿಷನ್ ಹಣವನ್ನು ನ್ಯಾಯಬೆಲೆ ಅಂಗಡಿ ವರ್ತಕರ ಖಾತೆಗೆ ನೀಡಬೇಕು 2018 ರಿಂದ ಈಕೆವೈಸಿ ಹಣ ನೀಡಬೇಕು ಉಳಿದ ರಾಜ್ಯಗಳು ನೀಡುತ್ತಿದ್ದಂತೆ ಪ್ರತಿ ಕ್ವಿಂಟಲ್ ಗೆ 250 ರೂಪಾಯಿಯಂತೆ ಹೆಚ್ಚಳವಾಗಬೇಕು ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ಬೇಡಿಕೆಗಳೊಂದಿಗೆ ತಹಸೀಲ್ದಾರ ಮೂಲಕ ನಿಮಗೆ ಮನವಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ತಹಸಿಲ್ದಾರ್ ಮಂಜುನಾಥ್ ಮುನವಳ್ಳಿ ಮನವಿ ಸ್ವೀಕರಿಸಿದರು ಬಡಿತರ ವಿತರಕ ಸಂಘದ ಅಧ್ಯಕ್ಷ ಲಿಂಗರಾಜ್ ಜಿ ನಾಯ್ಕ್ ಕೋಲ್ ಸಿರ್ಸಿ ,ಉಪಾಧ್ಯಕ್ಷ ರಾಘವೇಂದ್ರ ಭಟ್ , ಸಂಘದ ಜಿಡಿ ಹೆಗಡೆ ದೊಡ್ಮನೆ, ಮಂಜಪ್ಪ ನಮ್ಮ ನಾಯ್ಕ ಹಸುವಂತೆ ,ರಮೇಶ ಎಂ ನಾಯ್ಕ್ ಹಲಗೇರಿ ಜಿ ಆರ್ ನಾಯ್ಕ ಕಾನ್ಗೋಡು, ಗಣಪತಿ ಹಿತ್ಲಕೊಪ್ಪ ,ಅಶೋಕ್ ಡಿ ನಾಯ್ಕ ಬೆಡ್ಕಣಿ ,ಚಂದ್ರು ಬಿದ್ರಖಾನ್, ಎಂ,ಐ ನ್ಯಾಯ್ಕ ಲಂಬಾಪುರ, ಕೆರಿಯ ಬಿಳಿಯ ಗೌಡ ಗೋಳಿಮಕ್ಕಿ ಪಿ ಡಿ ನಾಯ್ಯ ಗುಂಜಗೋಡ, ಶಶಿಧರ್ ಆರ್ ಹೆಗಡೆ ಕಂಚಿಕೈ, ಉಪಸ್ಥಿತರಿದ್ದರು