ಸಿದ್ದಾಪುರ : ಶಾಲಾ ಸಂಸತ್ತಿನ ಮೂಲಕ ಹೊಣೆಗಾರಿಕೆ ಶಿಸ್ತು ಮತ್ತು ನಾಯಕತ್ವದ ಗುಣ ಲಕ್ಷಣಗಳನ್ನು ಹೊಂದಲು ಸಾಧ್ಯ. ವಿದ್ಯಾರ್ಥಿಗಳು ಪಠ್ಯೇತರ ಅಂಶಗಳನ್ನು ಅರಿಯಬೇಕು. ಜ್ಞಾನಾತ್ಮಕ ಅಂಶಗಳನ್ನು ಪಠ್ಯದಿಂದ ಪಡೆದರೆ ಜೀವನಾನುಭವವನ್ನು ಪಠ್ಯೇತರದಿಂದ ಪಡೆಯಲು ಸಾಧ್ಯ. ಶಾಲಾ ಸಂಸತ್ತಿನ ವಿವಿಧ ಖಾತ್ರೆಗಳ ಜವಾಬ್ದಾರಿಯನ್ನು ಅರಿತು ದೇಶದ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ, ವ್ಯವಸ್ಥೆಗಳ ಗುಣಲಕ್ಷಣಗಳನ್ನು ಶಾಲಾ ಹಂತದಲ್ಲಿ ಪಡೆದುಕೊಳ್ಳಲು ಅವಕಾಶವಾಗುತ್ತದೆ. ನಾವಿಂದು ಚರಿತ್ರೆಯ ಜೊತೆಗೆ ಚಾರಿತ್ರö್ಯವನ್ನು ಉಳಿಸಿಕೊಂಡು ಬರಬೇಕಾಗಿದೆ. ಚರಿತ್ರೆಗಿಂತ ಚಾರಿತ್ರö್ಯ ಬಲು ಹೆಚ್ಚಿನದು. ಎಂದು ಸಿದ್ದಾಪುರ ತಾಲಾಕಾ ಭಾರತ ಸ್ಕೌಟ್ಸ್ಸ್ ಮತ್ತು ಗೈಡ್ಸ್ ಸಮಿತಿಯ ಅಧ್ಯಕ್ಷ ಮತ್ತು ಸಾಹಿತಿ ಜಿ.ಜಿ. ಹೆಗಡೆ ಬಾಳಗೋಡ ಹೇಳಿದರು.
ಆಶಾ ಕಿರಣ ಟ್ರಸ್ಟಿನ ವತಿಯಿಂದ ನಡೆಯುವ ಸ್ಥಳೀಯ ಜೆ.ಎಂ.ಆರ್. ಅಂದ ವಿಧ್ಯಾರ್ಥಿಗಳ ವಸತಿ ಶಾಲೆಯ ೨೦೨೩-೨೪ ನೇ ಸಾಲಿನ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿರು.
ಅತಿಥಿಗಳಾಗಿ ಆಶಾ ಕಿರಣ ಟ್ರಸ್ಟಿನ ಟ್ರಸ್ಟೀ ಮಧುಮತಿ ಶೀಗೆಹಳ್ಳಿ ಅವರು ಮಾತನಾಡುತ್ತಾ ವಿಧ್ಯಾರ್ಥಿ ಹಂತದಲ್ಲಿ ನಾಯಕ್ವದ ಗುಣಲಕ್ಷಣಗಳನ್ನು ಪಡೆಯುವುದರ ಮೂಲಕ ಉತ್ತಮ ಭಾವಿ ನಾಗರಿಕರನ್ನು ಕಾಣಲು ಸಾಧ್ಯ ಎಂದು ಹೇಳಿದರು.