ಸಿದ್ದಾಪುರ : ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕೊಠಡಿಯ ಎದುರು ಸಾರ್ವಜನಿಕರಿಂದ ಪ್ರತಿಭಟನೆ.

ಸಿದ್ದಾಪುರ : ತಾಲೂಕಿನ ಭೂ ದಾಖಲೆ ಇಲಾಖೆಯ ವಿಭಾಗದಲ್ಲಿ ಅಧಿಕಾರಿಗಳಿಂದ ನಡೆಯುತ್ತಿರುವ ಭೃಷ್ಟಚಾರವನ್ನು ಖಂಡಿಸಿ ತಾಲೂಕು ಆಡಳಿತ ಕಟ್ಟಡದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕೊಠಡಿಯ ಎದುರು ಸಾರ್ವಜನಿಕರು ಪಕ್ಷಾತೀತವಾಗಿ ಪ್ರತಿಭಟನೆ ನಡೆಸಿದರು .
ಸರ್ವೆ, ಪೋಡಿ, ಹದಬಸ್ತ ಗಳಿಗೆ ಜನರಿಂದ ಲಂಚ ಪಡೆದು ಅವರಿಗೆ ಕೆಲಸ ಮಾಡಿಕೊಡದೆ ಹಣವನ್ನು ವಾಪಾಸ್ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿ ಹಣ ಹಿಂದಿರುಗಿಸುವಂತೆ ಪ್ರತಿಭಟನೆ ನಡೆಸಿದರು
ಇಲಾಖೆ ಅಧಿಕಾರಿಗಳು ಖರ್ಚು ಬರುತ್ತದೆ ಎಂದು ಹೇಳುತ್ತಾರೆ ಸರಕಾರದ ಶುಲ್ಕ ಎಂದು ಭಾವಿಸಿ ಅಧಿಕಾರಿಗಳು ಕೇಳಿದಷ್ಟು ಹಣವನ್ನು ಬಡವರು ತಮಗೆ ಸಿಗಬೇಕಾದ ಆಸ್ತಿ ಸಿಗುತ್ತದೆ ಎಂದು ಬಂಗಾರ ಅಡುವಿಟ್ಟು ಎಲ್ಲೋಲ್ಲೋ ಸಾಲ ಮಾಡಿ ತಂದು ಕೊಡುತ್ತಾರೆ ಆದರೆ ಈ ಅಧಿಕಾರಿಗಳು ಸುಳ್ಳು ಹೇಳಿ ಹೆಚ್ಚಿನ ಹಣ ಪಡೆದು ಅವರಿಗೆ ಕೆಲಸ ಮಾಡಿ ಕೊಡದೆ, ವಿಳಂಬ ಮಾಡಿ ತೊಂದರೆ ನೀಡುತ್ತಾ ಬಂದಿದ್ದಾರೆ ಈ ಹಿಂದೆ ಹೇಗೆಲ್ಲ ಇತ್ತು ಗೊತ್ತಿಲ್ಲ ಆದರೆ ಆ ರೀತಿಯ ಭ್ರಷ್ಟಾಚಾರ ಇನ್ನು ಮುಂದೆ ನಡಿಯಲ್ಲ ನಾವು ಅಧಿಕಾರ ಕ್ಕೆ ಬಂದ ಮೇಲೆ ಸಮಸ್ಯೆ ಸರಿಪಡಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ್ ಹೇಳಿದರು


ಜೆಡಿಎಸ್ ಮುಖಂಡ ಇಲಿಯಾಸ್ ಮಾತನಾಡಿ ಸಣ್ಣ ಪುಟ್ಟ ಕೆಲಸಕ್ಕೂ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಲಂಚ ಪಡೆಯುತ್ತಿರುವುದು ಗಮನ ಕ್ಕೆ ಬಂದಿತ್ತು ಇದನ್ನ ಸಂಬಂದಿಸಿದ ಅಧಿಕಾರಿಗಳಿಗೆ ತಿಳಿಸಲಾಗಿದೆ ಪತ್ರಿಕೆಗಳಲ್ಲೂ ಬಂದಿದೆ ಇಷ್ಟಾದರೂ ಸಹ ಕ್ರಮ ಅಗಲ್ಲಿಲ್ಲ ಹೀಗೆ ಆದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎನ್ನುವುದು ಪ್ರಶ್ನೆ ಮತ್ತು ಇಲ್ಲಸಲ್ಲದ ಕಾರಣ ಹೇಳಿ ಹಣ ಮಾಡಲು ಹೊರಟಿದ್ದಾರೆ ಇಂತಹ ಅಧಿಕಾರಿ, ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಆಗಬೇಕು ಇಲ್ಲದಿದ್ದರೆ ಹೋರಾಟ ಮುಂದುವರೆಯುತ್ತದೆ ಎಂದರು
ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಮಾಡಿದರು ವಿಫಲವಾಯಿತು
ಎ ಡಿ ಎಲ್ ಆರ್ ರನ್ನು ಕರೆಯಿಸಿ ಜನ ಸಂಪರ್ಕ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು
ಈ ಸಂದರ್ಭದಲ್ಲಿ ಸುರೇಂದ್ರ ಗೌಡ, ಚಂದ್ರು ಕಾನಡೆ, ಕೆ ಟಿ ಹೊನ್ನೇಗುಂಡಿ, ವಿಶ್ವ ಇಟಗಿ, ಪ್ರಶಾಂತ್ ನಾಯ್ಕ್, ಮುನವರ ಗುರ್ಕಾರ, ರಿಯಾಜ್ ಹೊಸೂರ್ ಮತ್ತಿತರರು ಉಪಸ್ಥಿತರಿದ್ದರು