ಜಿಲ್ಲೆಯ ಸುಪ್ರಸಿದ್ದ ಭಟ್ಕಳ ಮಾರಿ ಜಾತ್ರೆ ಆರಂಭ – ದೇವಸ್ಥಾನದ ಗದ್ದುಗೆ ಅಲಂಕರಿಸಿದ ಮಾರಮ್ಮ

ಜಿಲ್ಲೆಯ ಸುಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಭಟ್ಕಳದ ಮಾರಿ ಜಾತ್ರೆ ಇಂದಿನಿಂದ ಆರಂಭವಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ವಿಜೃಂಬಣೆಯಿಂದ ಅದ್ದೂರಿಯಾಗಿ ನಡೆಯುವ ಭಟ್ಕಳದ ಮಾರಿ ದೇವಿ ಜಾತ್ರೆ ಇಂದಿನಿಂದ ಆರಂಭವಾಗಿದೆ.

ಮಣ್ಕುಳಿಯ ವಿಶ್ವಕರ್ಮ ಸಮಾಜದ ಮಾರುತಿ ಆಚಾರ್ಯ ಮನೆಯಲ್ಲಿ ದೇವಿಯ ಮೂರ್ತಿ ಕೆತ್ತನೆ ಕಾರ್ಯ ಮುಗಿದಿದ್ದು, ಮಂಗಳವಾರದಂದು, ದೇವಿಗೆ ಬಣ್ಣ ಬಳಿದು ವಿಶೇಷ ಪೂಜೆಯನ್ನು ನೇರವೇರಿಸಲಾಯ್ತು.ವಿಶ್ವಕರ್ಮ ಮಹಿಳೆಯರು ದೇವಿಗೆ ಸುಹಾಸಿನಿ ಪೂಜೆ, ಷೋಡಶೋಪಚಾರ ಪೂಜೆ ನಡೆಸಿದ್ರು. ನಂತರ ಮಹಾ ಮಂಗಳಾರತಿ ಪೂಜೆ ನಡೆಸಿ ಬುಧವಾರ ಮುಂಜಾನೆ 5.30ಗೆ ಮಾರಿ ದೇವಿಯನ್ನು ಅದ್ದೂರಿ ಮೆರವಣಿಗೆಯ ಮೂಲಕ ಇಲ್ಲಿನ ಪೇಟೆ ರಸ್ತೆಯಲಿರುವ ಶ್ರೀ ಮಾರಿಕಾಂಬಾ ದೇವಾಲಯಕ್ಕೆ ಸಕಲ ಸಂಭ್ರಮದಿಂದ ಕರೆತಂದಿದ್ದಾರೆ.

ಅದ್ದೂರಿಯಾಗಿ ಕರೆತಂದ ಮಾರಿ ದೇವಿಯ ಮೂರ್ತಿಗೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಮಾರಿಕಾಂಬಾ ದೇವಿಯ ಎದುರಿಗೆ ಗರ್ಭಗುಡಿಯ ಹೊರಗಡೆ ಪ್ರತಿಷ್ಠಾಪನೆ ಮಾಡಿ ಪೂಜಾ ಕಂಕೈರ್ಯಗಳನ್ನು ನಡೆಸಲಾಯ್ತು. ಮಾರಿಗದ್ದುಗೆಯಲ್ಲಿ ಮಾರಿ ಮೂರ್ತಿಯನ್ನು ಪ್ರತಿಷ್ಟಾಪಿಸುವ ಮೂಲಕ 2 ದಿನಗಳ ಮಾರಿ ಜಾತ್ರೆ ಮಹೋತ್ಸವ ಚಾಲನೆಗೊಂಡಿದೆ.