ಹಳಿಯಾಳ ಪಟ್ಟಣದಲ್ಲಿ ಕಳವಾಗಿದ್ದ ಕಾರನ್ನು ಪತ್ತೆ ಹಚಿದ ಪೊಲೀಸರು : ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ಹಳಿಯಾಳ : ಮನೆ ಮುಂದೆ ನಿಲ್ಲಿಸಿಟ್ಟಿದ್ದ ಕಾರನ್ನು ಕಳವುಗೈದಿರುವುದನ್ನು ದೂರು ದಾಖಲಿಸಿಕೊಂಡು ಪತ್ತೆ ಹಚ್ಚಿ ವಾರಿಸುದಾರರಿಗೆ ಹಸ್ತಾಂತರಿಸಿ ಎಲ್ಲರ ಮೆಚ್ಚುಗೆಗೆ ಹಳಿಯಾಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾತ್ರವಾಗಿರುವ ಘಟನೆ ನಡೆದಿದೆ.

ಹಳಿಯಾಳ ಪಟ್ಟಣದಲ್ಲಿ ಮಂಜುನಾಥ್ ಜಟಾರ ಎಂಬವರ ಮನೆಯ ಮುಂದೆ ನಿಲ್ಲಿಸಿಟ್ಟಿದ್ದ ರಾಹುಲ್ ರವಳನಾಥ ಕಡೋಳಕರ ಮಾಲೀಕತ್ವದ ಕೆಎ:03, ಎಇ: 0631 ಸಂಖ್ಯೆಯ ಕಾರನ್ನು ಕಳೆದೆರಡು ದಿನಗಳ ಹಿಂದೆ ಕಳವುಗೈಯಲಾಗಿತ್ತು. ಈ ಬಗ್ಗೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ನುವರ್ಧನ್.ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಜಯಕುಮಾರ್, ಡಿವೈಎಸ್ಪಿ ಶಿವಾನಂದ ಕಟಗಿ ಮತ್ತು ಸಿಪಿಐ ಸುರೇಶ್ ಸಿಂಗೆಯವರ ಮಾರ್ಗದರ್ಶನದಲ್ಲಿ ಪಿಎಸ್ಐಗಳಾದ ವಿನೋದ್ ರೆಡ್ಡಿ ಮತ್ತು ಅಮೀನ್ ಅತ್ತಾರ ಅವರ ನೇತೃತ್ವದಲ್ಲಿ ಎಎಸೈ ಸುರೇಶ್ ಘಾಟಗೆ, ಪೊಲೀಸ್ ಸಿಬ್ಬಂದಿಗಳಾದ ಇಸ್ಮಾಯಿಲ್ ಕೋಣನಕೇರಿ, ಎಂ.ಎಂ.ಮುಲ್ಲಾ, ಶ್ರೀಶೈಲ.ಜಿ.ಎಂ, ಕುಬೇರ ಹೊಸೂರ, ಸೊಹೇಲ್ ನಾಗನೂರ್ ಹಾಗೂ ಉಮೇಶ್ ಹನಗುಂಡಿಯವರ ತಂಡ ತನಿಖೆಗಿಳಿದು, ಖಚಿತ ಮಾಹಿತಿಯಡಿ ಆರೋಪಿಯಾದ ಸಿದ್ದರಾಮೇಶ್ವರ ಗಲ್ಲಿಯ ನಿವಾಸಿ ಸಂತೋಷ್ ಮಲ್ಲೇಶಿ ವಡ್ಡರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ ನಂತರ ಆರೋಪಿತನಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಂತೋಷ್ ಮಲ್ಲೇಶಿ ವಡ್ಡರ್ ಈತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ.

ಹಳಿಯಾಳ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ವಿಷ್ಣುವರ್ಧನ್ ಅವರು ಶ್ಲಾಘಿಸಿದ್ದಾರೆ.