ಹಳಿಯಾಳ : ಪಟ್ಟಣದಲ್ಲಿರುವ ತಹಶೀಲ್ದಾರ್ ಕಾರ್ಯಾಲಯದಲ್ಲಿ ಡಾ.ಫ.ಗು.ಹಳಕಟ್ಟಿಯವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯ್ತು.
ಗ್ರೇಡ್ 2 ತಹಶೀಲ್ದಾರ್ ರತ್ನಾಕರ್ ಅವರು ಡಾ.ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ಡಾ.ಫ.ಗು. ಹಳಕಟ್ಟಿಯವರ ಜೀವನ ವ್ಯಕ್ತಿತ್ವವನ್ನು ಸ್ಮರಿಸಿಕೊಂಡರು. ಮುಖ್ಯ ಅತಿಥಿಗಳಾಗಿ ಹಳಿಯಾಳ ತಾಲ್ಲೂಕು ಕಸಾಪ ಅಧ್ಯಕ್ಷೆ ಸುಮಂಗಲಾ ಅಂಗಡಿ,, ಕೃಷಿ ಅಧಿಕಾರಿ ಚಿಕ್ಕಮಠ್ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿದರು.
ಉಪನ್ಯಾಸಕರಾಗಿ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶಿವದೇಸಾಯಿ ಸ್ವಾಮಿಯವರು ಭಾಗವಹಿಸಿ ಮಾತನಾಡುತ್ತಾ, ಡಾ.ಫ.ಗು.ಹಳಕಟ್ಟಿಯವರ ಜೀವನ ಮತ್ತು ತ್ಯಾಗವನ್ನು ವಿವರಿಸಿ, ಅವರು ವಚನ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದರು. ಕಾಯಕ ತತ್ವವನ್ನು ಸದಾ ಪ್ರತಿಪಾದಿಸಿದ ಡಾ.ಫ.ಗು.ಹಳಕಟ್ಟಿಯವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಸದೃಢ ಸಮಾಜ ನಿರ್ಮಾಣ ಕಾರ್ಯದಲ್ಲಿ ನಾವೆಲ್ಲರೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕರವೇ (ನಾ) ಬಣದ ತಾಲ್ಲೂಕು ಘಟಕದ ಅಧ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ, , ಮುಖಂಡರುಗಳಾದ ಎಂ.ಬಿ.ತೋರಣಗಟ್ಟಿ, ವಿ.ಎ.ಹಳ್ಳಿ, ಜಿ.ಡಿ.ಗಂಗಾಧರ್, ಕಲ್ಯಾಣ್ ಯಡೋಗಿ ಮೊದಲಾದವರು ಹಾಗೂ ತಹಶೀಲ್ದಾರ್ ಕಾರ್ಯಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು