ಹಳಿಯಾಳ : ಆರ್ಥಿಕವಾಗಿ ಸದೃಢವಂತ ಮಹಿಳೆಯರಿಂದ ದೇಶದ ಆರ್ಥಿಕ ಅಭಿವೃದ್ಧಿ ಸಲುಭ ಸಾಧ್ಯ ಎಂದು ಧಾರವಾಡದ ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮೆಷಿನರಿ ಸಂಸ್ಥೆಯ ಯೋಜನಾ ಮತ್ತು ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥರಾದ ಪ್ರಶಾಂತ್ ದೀಕ್ಷಿತ್ ಅವರು ಹೇಳಿದರು.
ಅವರು ಹಳಿಯಾಳ ತಾಲ್ಲೂಕಿನ ಮುಂಡವಾಡದಲ್ಲಿ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಆಶ್ರಯದಡಿ, ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮೆಷಿನರಿ ಸಂಸ್ಥೆಯ ಸಹಭಾಗಿತ್ವದಡಿ ಹಮ್ಮಿಕೊಂಡಿದ್ದ ಒಂದು ತಿಂಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯು ಇಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿಸಲು ಶ್ರಮಿಸುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಟಾಟಾ ಹಿಟಾಚಿ ಕನ್ಸಟ್ರಕ್ಷನ್ ಮೆಷಿನರಿ ಸಂಸ್ಥೆಯ ಆಡಳಿತ ವಿಭಾಗದ ಮುಖ್ಯಸ್ಥರಾದ ಶಶಿಧರನ್ ನಾಯರ್, ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ಹಿರಿಯ ಸಲಹೆಗಾರರಾದ ಅನಂತಯ್ಯ ಆಚಾರ್, ಸಂಸ್ಥೇಯ ಯೋಜನಾ ಸಂಯೋಜಕರಾದ ವಿನಾಯಕ್ ಚೌವ್ಹಾಣ್ ಅವರು ಭಾಗವಹಿಸಿ ಶುಭ ಹಾರೈಸಿ ಮಾತನಾಡಿದರು. ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟಿ ಸಂಸ್ಥೆಯ ನಿರ್ದೇಶಕರಾದ ಪ್ರಶಾಂತ್ ಬಡ್ಡಿಯವರು ವಹಿಸಿದ್ದರು. ವೇದಿಕೆಯಲ್ಲಿ ತರಬೇತಿದಾರರಾದ ಅನಿತಾ.ಪಿ.ಪಾಟೀಲ್ ಉಪಸ್ಥಿತರಿದ್ದರು.