ರೋಟರಿ ಕ್ಲಬ್ ಅಧ್ಯಕ್ಷರಾಗಿ ಜೋಸೆಪ್ ಗೋನ್ಸಾಲಿಸ್, ಕಾರ್ಯದರ್ಶಿ ಅಶುತೋಷ್ ಕುಮಾರ್ ರಾಯ್, ಖಜಾಂಚಿಯಾಗಿ ದೀಪಕ ಭಂಡಗಿ ಆಯ್ಕೆ

ದಾಂಡೇಲಿ : ನಗರದ ಪ್ರತಿಷ್ಟಿತ ಸಂಸ್ಥೆಯಾಗಿರುವ ರೋಟರಿ ಕ್ಲಬಿನ ನೂತನ ಸಾಲಿಗೆ ಅಧ್ಯಕ್ಷರಾಗಿ ಜೀವ ವಿಮಾ ನಿಗಮದ ನಗರದಲ್ಲಿರುವ ಶಾಖೆಯ ಅಧಿಕಾರಿ ಜೋಸೆಫ್ ಗೋನ್ಸಲಿಸ್ ಅವರು ಆಯೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸಾರಿಗೆ ಉದ್ಯಮಿ ಅಶುತೋಷ್ ಕುಮಾರ್ ರಾಯ್ ಹಾಗೂ ಖಾಜಾಂಚಿಯಾಗಿ ಅರಣ್ಯ ಇಲಾಖೆಯ ಅಧಿಕಾರಿ ದೀಪಕ್ ಭಂಡಗಿಯವರನ್ನು ಆಯ್ಕೆ ಮಾಡಲಾಗಿದೆ.

ಕ್ಲಬಿನ ನೂತನ ಸಾಲಿಗೆ ಉಪಾಧ್ಯಕ್ಷರಾಗಿ ನ್ಯಾಯವಾದಿ ರಾಹುಲ್ ಬಾವಾಜಿ, ಸಹ ಕಾರ್ಯದರ್ಶಿಯಾಗಿ ಮಿಥುನ್ ನಾಯಕ ಮತ್ತು ರೋಟರಿ ಕ್ಲಬಿನ ಸಜೆಂಟ್ ಎಟ್ ಆರ್ಮ್ಸ್ ಆಗಿ ವಿಜಯ ಕುಮಾರ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ರೋಟರಿ ಕ್ಲಬಿನ ಇನ್ನಿತರ ವಿಭಾಗಳ ಪ್ರಮುಖರಾಗಿ ಲಿಯೋ ಪಿಂಟೋ, ಡಾ.ಎಚ್.ವೈ.ಮೆರ್ವಾಡೆ, ಆರ್.ಪಿ.ನಾಯ್ಕ, ರಾಜೇಶ್ ತಿವಾರಿ, ಮನೋಹರ್.ಎಸ್.ಕದಂ ಅವರನ್ನು ಆಯ್ಕೆ ಮಾಡಲಾಯ್ತು. ರೋಟರಿ ಶಾಲೆಯ ಸಭಾಭವನದಲ್ಲಿ ನಿರ್ಗಮಿತ ಅಧ್ಯಕ್ಷರಾದ ಸುಧಾಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಹಾಗೂ ರೋಟರಿ ಕ್ಲಬಿನ ಸದಸ್ಯರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರುಗಿತು.