ದಾಂಡೇಲಿ : ನಗರದ ವಿವಿಧ ಹೋಟೆಲ್, ಬೇಕರಿ ಮತ್ತು ಗ್ಯಾರೇಜ್ಗಳಿಗೆ ಕಾರ್ಮಿಕ ಇಲಾಖೆ, ತಾಲ್ಲೂಕಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಿ ಬಾಲಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ಜಾಗೃತಿಯನ್ನು ಮೂಡಿಸಿತು.
ನಗರದ ಬಹುತೇಕ ಹೋಟೆಲ್ಗಳಿಗೆ, ಬೇಕರಿಗಳಿಗೆ ಮತ್ತು ಗ್ಯಾರೇಜ್ ಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ ಬಾಲ ಕಾರ್ಮಿಕ ನಿಷೇಧ ಕಾಯ್ದೆಯ ಬಗ್ಗೆ ಅರಿವನ್ನು ಮೂಡಿಸಿದೆ. ಈ ಸಂದರ್ಭದಲ್ಲಿ ಕಾರ್ಮಿಕ ನಿರೀಕ್ಷಕರಾದ ಲಕ್ಷ್ಮೀದೇವಿ ಚಿಕ್ಕಣ್ಣನವರ್, ಎಎಸೈ ಬಸವರಾಜ ಒಕ್ಕುಂದ, ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕಿ ಅನುಸೂಯ ರೇಡೆಕರ್, ಗ್ರಾಮ ಆಡಳಿತಾಧಿಕಾರಿ ದಯಾನಂದ ಚಿಟ್ಟಿ ಮೊದಲಾದವರು ಹಾಗೂ ಈ ಇಲಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.