ಕೆಸರು ಗದ್ದೆಯಾದ ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತಟಗಾರಕ್ಕೆ ಹೋಗುವ ರಸ್ತೆ

ಯಲ್ಲಾಪುರ; ಚುನಾವಣೆಯ ಸಮಯದಲ್ಲಿ ರಸ್ತೆಗೆ ಮಣ್ಣುಹಾಕಿ ಮತದಾರರ ಓಲೈಸಲು ಮಾಡಿದ ಕೆಲಸದಿಂದಾಗಿ ಈಗ ಮಳೆಗಾಲದಲ್ಲಿ ನಿತ್ಯ ಓಡಾಡಲು ಗ್ರಾಮಸ್ಥರು ಪರದಾಡುತ್ತಿದ್ದಾರೆ.
ಈರಸ್ತೆಯ ಸ್ಥಿತಿ ನೋಡಿದರೆ,ಅಯ್ಯೋ ಎಂಬಂತಿದೆ.
ತಾಲೂಕಿನ ಆನಗೋಡ ಗ್ರಾಮ ಪಂಚಾಯತ್ ವ್ಯಾಪ್ತಿಯ ತಟಗಾರಕ್ಕೆ ಹೋಗುವ ರಸ್ತೆ ಅಕ್ಷರಶಃ ಕೆಸರು ಗದ್ದೆಯಾಗಿದೆ.ರಸ್ತೆಯಲ್ಲಿ ಓಡಾಡುವುದು ಹೇಗೆಂಬುದು ಗ್ರಾಮಸ್ಥರ ಚಿಂತೆಯಾಗಿದೆ.
ರಸ್ತೆ ಮಾಡದೇ ಹತ್ತು ವರ್ಷಕಳೆದಿತ್ತು ರಸ್ತೆ ಮಾಡಿ ಎಂದು ಮನವಿ ನೀಡಿ ಸಾಕಾಗಿದ್ದು,ಆದರೆ ಅದಕ್ಕೆ ಸ್ಪಂದನೆ ದೊರೆತಿಲ್ಲ.ಅವರಿಗೆ ಹೇಳಿ ಇವರಿಗೆ ಹೇಳಿ,ಇಂದು ಬನ್ನಿ ನಾಳೆ ಬನ್ನಿ ಎಂದು ಸತಾಯಿಸಿದ್ದು,ಕೊನೆಗೆ ಚುನಾವಣೆ ಬಂದಾಗ ತರಾತುರಿಯಲ್ಲಿ ರಸ್ತೆಗೆ ಮಣ್ಣುಹಾಕಿ ಕೈತೊಳೆದು ಕೊಂಡಿದ್ದಾರೆ.
ಈರಸ್ತೆಯಲ್ಲಿ ಹಂಗಾರಿಮನೆ,ಜೋಗದಮನೆ,ತಂಬೊಳ್ಳಿಮನೆ,ಮೂಲೆಮನೆ,ಬದನೆಪಾಲು, ಹೀಗೆ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳ ಜನರು ಇದೇ ನಿತ್ಯ ಓಡಾಡುತ್ತಾರೆ.ರಸ್ತೆಗೆ ಮಣ್ಣು ಹಾಕಿ ಕೆಸರಲ್ಲಿ ಗಾಡಿ ಓಡಿಸಲಾಗದೇ ತೊಂದರೆ ಪಡುತ್ತಿದ್ದಾರೆ.ಕಾರಣ ಕೂಡಲೇ ಕೆಸರಾದ ರಸ್ತೆ ಸರಿಪಡಿಸಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರಾದ ಪ್ರಸಾದ ಭಟ್ಟ, ಸುಬ್ರಹ್ಮಣ್ಯ ಹಂಗಾರಿ,ರಾಜು ಹಂಗಾರಿ,ಮಂಜುನಾಥ ಭಟ್ಟ,ಶಿವರಾಮ ಹಂಗಾರಿ,ಮುಂತಾದವರು ಆಗ್ರಹಿಸಿದ್ದಾರೆ.