ಭಟ್ಕಳ ತಾಲೂಕು ಆಡಳಿತ ಸೌಧದಲ್ಲಿ ವಿಶೇಷ ಚೇತನರ ಪರದಾಟ – ಸಾರ್ವಜನಿಕರಿಂದ ಆಕ್ರೋಶ

ಭಟ್ಕಳ ತಾಲೂಕು ಆಡಳಿತ ಸೌದದಲ್ಲಿ ಸೆರೆಯಾದ ದೃಶ್ಯಗಳಿವು. ವಿದ್ಯುತ್ ಸ್ಥಗಿತದಿಂದ ಪರ್ಯಾಯ ವ್ಯವಸ್ಥೆ ಇಲ್ಲದೆ ವಿಶೇಷಚೇತನರನ್ನು ವ್ಹೀಲ್‌ಚೇರ್‌ನಲ್ಲಿ ಹೊತ್ತುಕೊಂಡು ಮೊದಲ ಮಹಡಿಗೆ ಸಾಗಿಸಿದ ಘಟನೆ ನಡೆದಿದೆ…

ಕೋಣಾರ ಗ್ರಾಮದ ಗಾಳಿಕಟ್ಟೆಯಿಂದ ಭಟ್ಕಳ ಉಪನೋಂದಣಾಧಿಕಾರಿ ಕಚೇರಿಗೆ ವಿಶೇಷ ಚೇತನರು ಆಗಮಿಸಿದ್ದರು. ಉಪನೋಂದಣಾಧಿಕಾರಿ ಕಚೇರಿ ತಾಲೂಕು ಆಡಳಿತ ಸೌಧದ ಮೊದಲ ಮಹಡಿಯಲ್ಲಿದೆ. ವಿದ್ಯುತ್ ಕೈಕೊಟ್ಟಿದ್ದರಿಂದ ಲಿಫ್ಟ್ ಬಂದಾಗಿತ್ತು. ಪರ್ಯಾಯವಾಗಿ ಆಡಳಿತ ಸೌಧದಲ್ಲಿ ಜನರೇಟರ್ ಇಲ್ಲ. ಹೀಗಾಗಿ ವ್ಹೀಲ್‌ಚೇರ್‌ನಲ್ಲಿ ಬಂದ ಇಬ್ಬರು ವಿಶೇಷ ಚೇತನರನ್ನು ಅವರ ಸಂಬಂಧಿಕರು ಮೊದಲ ಮಹಡಿಗೆ ಹೊತ್ತುಕೊಂಡು ಹೋಗಿದ್ದಾರೆ. ಹೀಗೆ, ಸಾಗಿಸುವಾಗ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ? ಕೂಡಲೇ ತಾಲೂಕು ಆಡಳಿತ ಸೌಧದಲ್ಲಿ ಜನರೇಟರ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…

ಉದಯ ನಾಯ್ಕ, ನುಡಿ ಸಿರಿ ನ್ಯೂಸ್‌, ಭಟ್ಕಳ್‌