ತಟ್ಟಿಗೇರಾದಲ್ಲಿ ಆರ್.ವಿ.ದೇಶಪಾಂಡೆಯವರಿಂದ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆ

ಹಳಿಯಾಳ : ತಾಲ್ಲೂಕಿನ ತಟ್ಟಿಗೇರಾದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಂಗನವಾಡಿ ಕೇಂದ್ರದ ಉದ್ಘಾಟನೆಯು ಇಂದು ಬೆಳಿಗ್ಗೆ 11.30 ಗಂಟೆಗೆ ನಡೆಯಲಿದ್ದು, ಶಾಸಕರಾದ ಆರ್.ವಿ.ದೇಶಪಾಂಡೆಯವರು ನೂತನ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಅದಕ್ಕೂ ಮೊದಲು ಬೆಳಿಗ್ಗೆ 11 ಗಂಟೆಗೆ ಹಳಿಯಾಳ ಪಟ್ಟಣದಲ್ಲಿರುವ ತಹಶೀಲ್ದಾರರ ಕಾರ್ಯಾಲಯದಲ್ಲಿ ಆಯೋಜಿಸಲಾದ ನಾಡಪ್ರಭು ಕೆಂಪೆಗೌಡರ ಜಯಂತಿ ಕಾರ್ಯಕ್ರಮದಲ್ಲಿ ಆರ್.ವಿ.ದೇಶಪಾಂಡೆಯವರು ಭಾಗವಹಿಸಲಿದ್ದಾರೆ.