ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸೇನೆಗೆ ಪ್ರತಿಭಟನಾ ನಿರತ ಮಹಿಳೆಯರೇ ದೊಡ್ಡ ಸವಾಲಾಗಿದ್ದಾರೆ. ಉದ್ದೇಶಪೂರ್ವಕವಾಗಿಯೇ ಸೇನೆಯ ಕಾರ್ಯಾಚರಣೆಗೆ ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ನಿರತ ಮಹಿಳೆಯರು ರಸ್ತೆ ತಡೆ ನಡೆಸುತ್ತಿದ್ದು, ಸೇನಾ ಸಿಬ್ಬಂದಿಗೆ ತಮ್ಮ ಕಾರ್ಯಾಚರಣೆಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಸೇನೆ ಹೇಳಿದೆ. ಜತೆಗೆ ಫೋಟೊವನ್ನು ಕೂಡ ಹಂಚಿಕೊಂಡಿದೆ.
ಮಣಿಪುರದಲ್ಲಿ ಮಹಿಳೆಯರು ಉದ್ದೇಶಪೂರ್ವಕವಾಗಿ ತಮ್ಮ ಕಾರ್ಯಾಚರಣೆಗೆ ಅಡ್ಡಿಪಡಿವುದು ಕಾನೂನು ಬಾಹಿರ ಎಂದು ಸೇನೆ ಹೇಳಿದೆ. ಭದ್ರತಾ ಸಿಬ್ಬಂದಿಯ ಚಲನವಲನವನ್ನು ನಿರ್ಬಂಧಿಸುವುದು ಕಾನೂನು ಬಾಹಿರ ಮಾತ್ರವಲ್ಲ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತಿದೆ.
ಸೋಮವಾರ ತಡರಾತ್ರಿ, ಭಾರತೀಯ ಸೇನೆಯು ಟ್ವೀಟ್ ಮಾಡಿದ್ದು, ಇದರಲ್ಲಿ ಮಹಿಳಾ ಕಾರ್ಯಕರ್ತರು ಯೋಧರನ್ನು ಮುಂದೆ ಸಾಗದಂತೆ ತಡೆಯುತ್ತಿರುವುದನ್ನು ಕಾಣಬಹುದು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸಬೇಕೆಂದು ಒತ್ತಾಯಿಸಿ ಮೈಥಿ ಸಮುದಾಯದ ಸದಸ್ಯರು ಮಹಾರಾಷ್ಟ್ರದ ಪುಣೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಗಲಭೆಯಲ್ಲಿ 100ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ, 60 ಸಾವಿರ ಮಂದಿ ಸ್ಥಳಾಂತರಗೊಂಡಿದ್ದಾರೆ. ನಿತ್ಯವೂ ಗುಂಡಿನ ಚಕಮಕಿ ನಡೆಯುತ್ತಿದ್ದು, ಜನರು ಯುದ್ಧದ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಒಂದೆರಡು ದಿನಗಳ ಹಿಂದೆ 12 ಉಗ್ರರನ್ನು ಸೇನೆಯು ಬಂಧಿಸಿತ್ತು ಆದರೆ ಮಹಿಳೆಯರ ಒತ್ತಾಯದ ಮೇರೆಗೆ ಅವರನ್ನು ಬಿಡುಗಡೆ ಮಾಡಿತ್ತು.