ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಶವದ ಬಾಯಿಗೆ ನೀರು ಬಿಟ್ಟ ಗ್ರಾಮಸ್ಥರು

ವಿಜಯಪುರ (ಜೂ.25): ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ.

ರಾಜ್ಯಾದ್ಯಂತ ಕಾಂಗ್ರೆಸ್‌ ಸರ್ಕಾರ ಬಂತು, ಬರಗಾಲ ತಂತು ಎಂದು ಮಾತಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಮುಂಗಾರು ಮಳೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಮಳೆಗಾಗಿ ರಾಜ್ಯಾದ್ಯಂತ ಗ್ರಾಮಗಳಿಂದ ವಿಚಿತ್ರ ಹರಕೆ, ಪೂಜೆ ಮತ್ತು ಆಚರಣೆಗಳನ್ನು ಮಾಡಲಾಗುತ್ತಿದೆ. ಅದೇ ರೀತಿ, ವಿಜಯಪುರ ಜಿಲ್ಲೆಯಲ್ಲಿ ಮಳೆಗಾಗಿ ಸ್ಮಶಾನದಲ್ಲಿ ಹೂತಿದ್ದ ಸಮಾಧಿಗೆ ರಂಧ್ರವನ್ನು ತೋಡಿ, ಶವದ ಬಾಯಿಗೆ ಟ್ಯಾಂಕರ್‌ ಮೂಲಕ ನೀರು ಬಿಡುವ ವಿಚಿತ್ರ ಆಚರಣೆಯನ್ನು ಮಾಡಿದ್ದಾರೆ. 

ಶವದ ಬಾಯಿಗೆ ನೀರು ಬಿಟ್ಟರೆ ಮಳೆ ಆಗಮನ:  ಸ್ಮಶಾನದಲ್ಲಿ ಕೆಲವು ಶವಗಳು ನೀರಿಗಾಗಿ ಬಾಯಿತೆರೆದು ಕುಳಿತಿರುತ್ತವೆ. ಹೀಗಾಗಿ, ಅಂತಹ ಶವಗಳಿಗೆ ನೀರು ಬಿಡದೇ ಹೂತು ಹಾಕಿದ್ದರೆ ಊರಿಗೆ ಮಳೆ ಬರುವುದಿಲ್ಲ ಎಂಬ ವಿಚಿತ್ರ ನಂಬಿಕೆಯಿದೆ. ಹೀಗಾಗಿ, ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದವರ ಮೃತದೇಹಗಳನ್ನು ಮಣ್ಣು ಮಾಡಿ ಸಮಾಧಿ ಮಾಡಲಾಗಿದ್ದ ಶವಗಳ ಸಮಾಧಿಗೆ ರಂಧ್ರವನ್ನು ಕೊರೆದು ಶವದ ಬಾಯಿಗೆ ನೀರು ಹೋಗುವಂತೆ ಟ್ಯಾಂಕರ್‌ ಮೂಲಕ ನೀರನ್ನು ಬಿಡಲಾಗುತ್ತದೆ. ಶವಗಳಿಗೆ ನೀರು ಕುಡಿಸಿದ ನಂತರ ಗ್ರಾಮಕ್ಕೆ ಮಳೆಯಾಗುತ್ತದೆ ಎಂದ ನಂಬಿಕೆ ಗ್ರಾಮಸ್ಥರದ್ದಾಗಿರುತ್ತದೆ. 

ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ. ಮಳೆಯಾಗಲಿ ಎಂದು ಕಲಕೇರಿಯ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ಗ್ರಾಮಸ್ಥರು ನೀರು ಬಿಟ್ಟಿದ್ದಾರೆ.  ಗೋರಿಗೆ ರಂಧ್ರ ಕೊರೆದು ಶವದ ಬಾಯಿ ಇರುವ ಜಾಗಕ್ಕೆ ಟ್ಯಾಂಕರ್ ಮೂಲಕ ನೀರು ಹಾಕಿದ್ದಾರೆ. ಗೋರಿಯೊಳಗಿನ ಶವದ ಬಾಯಿಗೆ ನೀರು ತಲುಪುವ ಹಾಗೇ ಪೈಪ್ ನಿಂದ ನೀರು ಬಿಟ್ಟ ಗ್ರಾಮಸ್ಥರು. ಹೀಗೆ ಸ್ಮಶಾನದಲ್ಲಿ ಹೂತ ಶವದ ಬಾಯಿಗೆ ನೀರು ಬಿಟ್ಟರೆ ಮಳೆಯಾಗುತ್ತೆ ಎನ್ನುವ ನಂಬಿಕೆಯಿದೆ. ಬರಗಾಲ ಉಂಟಾದಾಗ ಈ ಭಾಗದಲ್ಲಿ ಈ ವಿಚಿತ್ರ ಆಚರಣೆ ಮಾಡುವ ಪದ್ಧತಿ ಮಾಡುತ್ತಾ ಬಂದಿದ್ದಾರೆ. ಕಲಕೇರಿ ಗ್ರಾಮದ ವಾಗೀಶ್ ಹಿರೇಮಠ ನೇತೃತ್ವದಲ್ಲಿ ವಿಚಿತ್ರ ಆಚರಣೆ ಮಾಡಲಾಗಿದೆ.

ಮಳೆಗಾಗಿ ಗೋರಿಯ ಮೇಲೆ ಕುಳಿತು ಪ್ರಾರ್ಥನೆ: 
ಇನ್ನು ಬಾಯಿಗೆ ನೀರು ಹಾಕಿದ ನಂತರ ಶವವನ್ನು ಹೂತಿರುವ ಗೋರಿಯ ಮೇಲೆ ಕುಳಿತು ಪ್ರಾರ್ಥನೆ ಮಾಡಲಾಗುತ್ತದೆ. ನಿನಗೆ ನೀರು ಉಣಿಸಲಾಗಿದ್ದು, ನೀನು ಕೂಡ ಗ್ರಾಮಕ್ಕೆ ಮಳೆಯಾಗುವಂತೆ ಪ್ರಾರ್ಥನೆ ಮಾಡು ಎಂಬಂತೆ ಶವಗಳ ಆತ್ಮಗಳಿಗೆ ಸೂಚನೆ ನೀಡಲಾಗುತ್ತಿದೆ. ಇದಾದ ಕೆಲವೇ ದಿನಗಳಲ್ಲಿ ಮಳೆ ಆಗುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆಯಾಗಿದೆ. ಇನ್ನು ಸ್ಮಶಾನದಲ್ಲಿ ಪೂಜೆ ಸಲ್ಲಿಸಲು ಗ್ರಾಮದ ಎಲ್ಲ ಸದಸ್ಯರೂ ಸೇರಿ ಒಟ್ಟಾಗಿ ಈ ಆಚರಣೆಯನ್ನು ಮಾಡಲಾಗಿದ್ದು, ಈ ವರ್ಷ ಮಳೆ ಬರಲಿದೆ ಎಂದು ಗ್ರಾಮಸ್ಥರು ತಿಳಿಸಿದರು.