ಹಳಿಯಾಳ : ರಾಜ್ಯ ಸರಕಾರವು ಮಹಿಳೆಯರಿಗೆ ಸಾರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಜಾರಿಗೊಳಿಸಿದಾಗಿನಿಂದ ಟ್ಯಾಕ್ಸಿ, ಆಟೋ ಸೇರಿದಂತೆ ಖಾಸಗಿ ಪ್ರಯಾಣಿಕ ವಾಹನಗಳಿಗೆ ಸಂಕಷ್ಟ ಎದುರಾಗಿದೆ. ಸಾಲ ಸೋಲಮಾಡಿ ಟ್ಯಾಕ್ಸಿ ವಾಹನಗಳನ್ನು ಖರೀದಿಸಿ, ಸರಕಾರಕ್ಕೆ ಸಾರಿಗೆ ನಿಯಾಮವಳಿಯಂತೆ ತೆರಿಗೆಯನ್ನು ಪಾವತಿಸಿ, ಪ್ರಯಾಣಿಕ ಸೇವೆ ಮಾಡುತ್ತಾ ಬಂದಿರುವ ಟ್ಯಾಕ್ಸಿ ಚಾಲಕರು ಇದೀಗ ಬಾಡಿಗೆಯಿಲ್ಲದೇ ಕಂಗಲಾಗಿದ್ದಾರೆ. ಈ ಹಿನ್ನಲೆಯಲ್ಲಿ ರಾಜ್ಯದ ಟ್ಯಾಕ್ಸಿ, ಆಟೋ ಚಾಲಕರ ಬದುಕಿನ ಸಮಸ್ಯೆಯನ್ನು ಅರಿತು ಯೋಗ್ಯ ಕ್ರಮವನ್ನು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಕೈಗೊಳ್ಳಬೇಕೆಂದು ಹಳಿಯಾಳ ಪಟ್ಟಣದಲ್ಲಿ ಇಂದು ಕಿತ್ತೂರು ರಾಣಿ ಚೆನ್ನಮ್ಮ ಟ್ಯಾಕ್ಸಿ ಚಾಲಕರ ಸಂಘದ ಗೌರವಾಧ್ಯಕ್ಷರಾದ ಅಣ್ಣಪ್ಪ ಕಲಾಲ್ ಅವರು ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.
ಬೈಟ್: ಅಣ್ಣಪ್ಪ ಕಲಾಲ್, ಗೌರವಾಧ್ಯಕ್ಷರು, ಕಿತ್ತೂರು ರಾಣಿ ಚೆನ್ನಮ್ಮ ಟ್ಯಾಕ್ಸಿ ಚಾಲಕರ ಸಂಘ, ಹಳಿಯಾಳ