ಕಾನೂನು ಬಾಹಿರವಾಗಿ ಬಾಡಿಗೆ ಓಡಿಸುವ ಖಾಸಗಿ ಉಪಯೋಗದ ವಾಹನ ಮಾಲಿಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಯಲ್ಲಾಪುರದ ಟ್ಯಾಕ್ಷಿ ಚಾಲಕ ಮಾಲಕ ಸಂಘದವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಅಧಿಕೃತವಾಗಿ ವಾಹನ ನೊಂದಣಿ ಮಾಡಿಕೊಂಡು,ಸರಕಾರಕ್ಕೆ ಕಾಲಕಾಲಕ್ಕೆ ಟ್ಯಾಕ್ಸ ತುಂಬಿಕೊಂಡು ಬಾಡಿಗೆ ವಾಹನ ಓಡಿಸುತ್ತಿದ್ದೇವೆ.ಆದರೆ ಇತ್ತೀಚಿನ ದಿನಗಳಲ್ಲಿ ಖಾಸಗಿ ಉಪಯೋಗಕ್ಕೆ ನೊಂದಾಯಿಸಿಕೊಂಡ ವಾಹನ ಮಾಲಿಕರು, ಅನಧಿಕೃತವಾಗಿ ಬಾಡಿಗೆ ಓಡಿಸುತ್ತಿದ್ದಾರೆ. ಇದರಿಂದಾಗಿ ನಮಗೆ ಜೀವನ ನಡೆಸಲು ಬಾಡಿಗೆ ಸಿಗದೇ ತೊಂದರೆಯಾಗುತ್ತಿದೆ. ಕಾರಣ ವೈಟ್ ಬೊರ್ಡ ವಾಹನದಲ್ಲಿ ಬಾಡಿಗೆ ಓಡಿಸುವ ವಾಹನದ ವಿರುದ್ದ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ಈ ವೇಳೆ ಸಂಘಟನೆಯ ಅಧ್ಯಕ್ಷ ಸಂತೋಷ ನಾಯ್ಕ, ಶ್ರೀಕಾಂತ ಪಾಟೀಲ್, ಸಂದೀಪ ಒಡ್ಡರ್,ಆಕಾಶ ನಾಯ್ಕ, ವಿನಾಯಕ ಚವ್ಹಾಣ,ಇತರರು ಉಪಸ್ಥಿತರಿದ್ದರು…
ಶ್ರೀಧರ್ ಅನಲಗಾರ್, ನುಡಿ ಸಿರಿ ನ್ಯೂಸ್, ಯಲ್ಲಾಪುರ