ಗೂಡಂಗಡಿ, ಹೊಟೆಲ್, ಢಾಬಾಗಳಲ್ಲಿ ಅನಧಿಕೃತ ಸಾರಾಯಿ ಮಾರಾಟ: ಕ್ರಮಕ್ಕೆ ಆಗ್ರಹ

ಕುಮಟಾ: ಜಿಲ್ಲೆಯಲ್ಲಿ ಗೂಡಂಗಡಿ, ಹೊಟೆಲ್ ಹಾಗೂ ಢಾಬಾಗಳಲ್ಲಿ ಅನಧಿಕೃತವಾಗಿ ಸಾರಾಯಿ ಮಾರಾಟವಾಗುತ್ತಿದೆ. ಈ ಕುರಿತು ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ಣಯಿಸಲಾಯಿತು. ಪಟ್ಟಣದ ವರದ ಇಂಟರ್‌ನ್ಯಾಷನಲ್‌ನಲ್ಲಿ ಜಿಲ್ಲಾ ಕರಾವಳಿ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷ ನಾಗರಾಜ ಹಿತ್ಲಮಕ್ಕಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಮಾತನಾಡಿದ ನಾಗರಾಜ ಹಿತ್ಲಮಕ್ಕಿ ಅಬಕಾರಿ ಇಲಾಖೆಯ ಅಧಿಕಾರಿಗಳು ಯಾವುದೇ ಕಿರುಕುಳ ನೀಡುತ್ತಿಲ್ಲ. ಅಬಕಾರಿ ಜಿಲ್ಲಾಧಿಕಾರಿ ಪ್ರತಿಯೊಂದಕ್ಕೂ ಸ್ಪಂದಿಸಿ, ಸೂಕ್ತ ಮಾರ್ಗದರ್ಶನ ನೀಡುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ಸರ್ಕಾರವೇ ಎಮ್.ಎಸ್.ಐ.ಎಲ್ ಮದ್ಯದ ಅಂಗಡಿ ತೆರೆಯುತ್ತಿದೆ. ಮದ್ಯ ಮಾರಾಟ ಪರವಾನಗಿ ಪಡೆದ ಸನ್ನದುರಾರರು ಯೂನಿಯನ್ ಕೈಗೊಂಡ ನಿರ್ಧಾರಕ್ಕೆ ಬದ್ಧರಾಗಿದ್ದರೆ ವ್ಯವಹಾರದಲ್ಲಿ ಏನೇ ಸಮಸ್ಯೆ ಎದುರಾದರೂ ಯೂನಿಯನ್ ಅವರ ಬೆಂಬಲಕ್ಕಿರುತ್ತದೆ ಎಂದರು.

ಸಂಘದ ಪ್ರಮುಖರಾದ ಬಿ.ಕೆ.ನಾಯ್ಕ , ರವಿಕುಮಾರ ಭಟ್ಕಳ, ಸಂತಾನ್ ಫರ್ನಾಂಡೀಸ್ ಸೇರಿದಂತೆ ಇತರರು
ಉಪಸ್ಥಿತರಿದ್ದರು.