ಸಿದ್ದಾಪುರ : ಪತ್ರಿಕೆಯಲ್ಲಿ ಅವಹೇಳನಕಾರಿ ಲೇಖನ ಖಂಡಿಸಿ ದೈವಜ್ಞ ಸಮಾಜದವರಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಕೆ.

ಸಿದ್ದಾಪುರ : ದೈವಜ್ಞ ಬ್ರಾಹ್ಮಣ ಸಮಾಜದವರು ಸಾವಿರಾರು ವರ್ಷಗಳಿಂದ ತಮ್ಮ ಕುಲಕಸುಬಾದ ಚಿನ್ನ ಬೆಳ್ಳಿಯ ಆಭರಣ ತಯಾರಿಸಿ ತಮ್ಮ ಜೀವನವನ್ನು ಅತ್ಯಂತ ಗೌರವದಿಂದ ಸಾಗಿಸುತ್ತಿದ್ದು,ಇತ್ತೀಚಿನ ದಿನಗಳಲ್ಲಿ ರಾಜ್ಯದಾದ್ಯಂತ ಚಿನ್ನಾಭರಣದ ದೊಡ್ಡ ದೊಡ್ಡ ಮಳಿಗೆಗಳು ಆರಂಭಗೊಂಡು ವ್ಯವಹಾರ ನಡೆಸುತ್ತಿವೆ.ಅದರ ಜೊತೆಗೆ ನಮ್ಮ ಸಮಾಜದ ಚಿನ್ನಾಭರಣ ಮಳಿಗೆಗಳು ಕೂಡ ವ್ಯಾಪಾರ ವಹಿವಾಟು ನಡೆಸುತ್ತಿವೆ.

ಟಿ.ಎ. ಎಸ. ಎಂಬ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಪ್ರಾರಂಭಗೊಂಡು ಚಿನ್ನಾಭರಣ ಮಳಿಗೆ ಪ್ರಾರಂಭಿಸಿದ್ದು ತಮ್ಮ ಜಾಹೀರಾತಿಗಾಗಿ ಪತ್ರಿಕೆಯಲ್ಲಿ ಸಂಪಾದಕರು ಹಾಗೂ ವರದಿಗಾರರನ್ನು ಒಳಗೊಂಡು ಲೇಖಕಿ ವಿನುತಾ ಹೆಗಡೆ ನಮ್ಮ ವೃತ್ತಿಯ ಬಗ್ಗೆ ಅವಹೇಳನಕಾರಿ ಶಬ್ದ ಬಳಸಿ ಕುಲಕಸುಬನ್ನು ಅವಮಾನಿಸಿ,ಸಮಾಜದ ಸ್ವಾಸ್ಥ ಕೆಡಿಸುವ ಕೆಲಸ ಮಾಡಿರುತ್ತಾರೆ.ಅದಕ್ಕಾಗಿ ಟಿ.ಎಸ್.ಎಸ್‌ .ನ ವ್ಯವಸ್ಥಾಪಕರು ಹಾಗೂ ಲೋಕಧ್ವನಿ ಪತ್ರಿಕೆ ಸಂಪಾದಕ ಮಂಡಳಿ ಹಾಗೂ ವರದಿಗಾರರು ಕ್ಷಮೆಯನ್ನು ಯಾಚಿಸಬೇಕು.ಇಲ್ಲವಾದಲ್ಲಿ ತಾಲೂಕಿನಾದ್ಯಂತ, ಜಿಲ್ಲೆಯಾದ್ಯಂತ, ರಾಜ್ಯಾದ್ಯಂತ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದೆಂದು ಹಾಗೂ ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾನ್ಯ ತಹಶೀಲ್ದಾರರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಉಪ ತಹಸೀಲ್ದಾರ್ ಡಿ.ಎಂ.ನಾಯ್ಕ್ ಮನವಿ ಸ್ವೀಕರಿಸಿದರು .ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಂತರಾಮ್ ವಿ. ಶೇಟ್, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ರಾಯ್ಕರ್, ಖಜಾಂಚಿ ಚಂದ್ರಹಾಸ ಜಿ. ಶೇಟ,ದೈವಜ್ಞ ಸರಾಫ ಸಂಘದ ಅಧ್ಯಕ್ಷ ಗುರುನಾಥ್ ಪಿ. ವೇರಣೇಕರ್,ಕಾರ್ಯದರ್ಶಿ ಮುಕುಂದ ಎಸ್. ಶೇಟ, ಯುವಕ ಸಂಘದ ಅಧ್ಯಕ್ಷ ಪ್ರಶಾಂತ ಡಿ. ಶೇಟ, ಕಾರ್ಯದರ್ಶಿ ಮನೋಹರ್ ಎಸ್. ರೇವಣಕರ್, ಗಣೇಶ್ಆರ್.ಶೇಟ, ವಿದ್ಯಾ ಪ್ರೋತ್ಸಾಹಕ ಸಮಿತಿ ಅಧ್ಯಕ್ಷ ಸಾಯಿನಾಥ ಎಸ್. ಅಣವೇಕರ, ಹಾಗೂ ಚಿನ್ನಾಭರಣದ ತಯಾರಕರು ಹಾಗೂ ವ್ಯಾಪಾರಸ್ಥರು ಮತ್ತು ಸಮಾಜ ಬಾಂಧವರು ಉಪಸ್ಥಿತರಿದ್ದರು.