ಜೋಯಿಡಾ : ದಟ್ಟ ಕಾಡು ಹಾಗೂ ಸಮೃದ್ಧ ಜೀವವೈವಿಧ್ಯತೆಗಳ ತವರೂರು ಎಂದೇ ಕರೆಯಬಹುದಾದ ಜೋಯಿಡಾ ತಾಲೂಕಿನ ಬಹುಭಾಗ ಅರಣ್ಯ ಪ್ರದೇಶದಿಂದಲೇ ಕೂಡಿದ್ದು, ಇಲ್ಲಿಯ ಅರಣ್ಯ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ, ವನ್ಯಜೀವಿ ಇಲಾಖೆಯ ಜೊತೆ ಜೊತೆಗೆ ಸ್ಥಳೀಯ ಜನತೆಯ ಪಾತ್ರವೂ ಕೂಡ ಬಹುಮುಖ್ಯವಾಗಿದೆ.
ವಿವಿಧ ಜಾತಿಯ ಮರ ಗಿಡಗಳು, ವಿವಿಧ ಜಾತಿಯ ಜೀವ ವೈವಿಧ್ಯತೆಗಳು ತಾಲ್ಲೂಕಿನ ಸಮೃದ್ಧ ಪರಿಸರದಲ್ಲಿ ಇರುವುದನ್ನು ನಾವು ಗಮನಿಸಬಹುದು. ಅಂದಹಾಗೆ ನಾನು ಹೇಳಲು ಹೊರಟಿರುವುದು ತಾಲೂಕಿನ ಜಗಲ್ಪೇಟ್ ನ ಮುಖ್ಯರಸ್ತೆಯಲ್ಲಿ ಹಿಂಡುಗಟ್ಟಲೆ ಕಾಡುಕೋಣ ಮತ್ತು ಕಾಡೆಮ್ಮೆಗಳು ರಸ್ತೆ ದಾಟಿದ ಅಪೂರ್ವ ದೃಶ್ಯವೊಂದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇಂದು ಗುರುವಾರ ವೈರಲ್ ಆಗ ತೊಡಗಿದೆ. ಶರವೇಗದಲ್ಲಿ ಓಡೋಡಿ ರಸ್ತೆ ದಾಟಿದ ಕಾಡೆಮ್ಮೆ ಮತ್ತು ಕಾಡುಕೋಣಗಳ ಈ ಅಪೂರ್ವ ದೃಶ್ಯ ಜೋಯಿಡಾ ತಾಲ್ಲೂಕಿನ ಜೋಯಿಡಾ ತಾಲ್ಲೂಕಿನ ಜಗಲ್ಬೇಟ್’ನಲ್ಲಿ ರಸ್ತೆ ದಾಟಿದ ಹಿಂಡು ಹಿಂಡು ಕಾಡುಕೋಣ ಮತ್ತು ಕಾಡೆಮ್ಮೆಗಳು
ಜೋಯಿಡಾ : ದಟ್ಟ ಕಾಡು ಹಾಗೂ ಸಮೃದ್ಧ ಜೀವವೈವಿಧ್ಯತೆಗಳ ತವರೂರು ಎಂದೇ ಕರೆಯಬಹುದಾದ ಜೋಯಿಡಾ ತಾಲೂಕಿನ ಬಹುಭಾಗ ಅರಣ್ಯ ಪ್ರದೇಶದಿಂದಲೇ ಕೂಡಿದ್ದು, ಇಲ್ಲಿಯ ಅರಣ್ಯ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಯಲ್ಲಿ ಅರಣ್ಯ ಇಲಾಖೆ, ವನ್ಯಜೀವಿ ಇಲಾಖೆಯ ಜೊತೆ ಜೊತೆಗೆ ಸ್ಥಳೀಯ ಜನತೆಯ ಪಾತ್ರವೂ ಕೂಡ ಬಹುಮುಖ್ಯವಾಗಿದೆ.
ವಿವಿಧ ಜಾತಿಯ ಮರ ಗಿಡಗಳು, ವಿವಿಧ ಜಾತಿಯ ಜೀವ ವೈವಿಧ್ಯತೆಗಳು ತಾಲ್ಲೂಕಿನ ಸಮೃದ್ಧ ಪರಿಸರದಲ್ಲಿ ಇರುವುದನ್ನು ನಾವು ಗಮನಿಸಬಹುದು. ಅಂದಹಾಗೆ ನಾನು ಹೇಳಲು ಹೊರಟಿರುವುದು ತಾಲೂಕಿನ ಜಗಲ್ಪೇಟ್ ನ ಮುಖ್ಯರಸ್ತೆಯಲ್ಲಿ ಹಿಂಡುಗಟ್ಟಲೆ ಕಾಡುಕೋಣ ಮತ್ತು ಕಾಡೆಮ್ಮೆಗಳು ರಸ್ತೆ ದಾಟಿದ ಅಪೂರ್ವ ದೃಶ್ಯವೊಂದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಇಂದು ಗುರುವಾರ ವೈರಲ್ ಆಗ ತೊಡಗಿದೆ. ಶರವೇಗದಲ್ಲಿ ಓಡೋಡಿ ರಸ್ತೆ ದಾಟಿದ ಕಾಡೆಮ್ಮೆ ಮತ್ತು ಕಾಡುಕೋಣಗಳ ಈ ಅಪೂರ್ವ ದೃಶ್ಯ ಜೋಯಿಡಾ ತಾಲ್ಲೂಕಿನ ಜೀವವೈವಿಧ್ಯತೆಗಳ ಸುಂದರವಾದ ಬದುಕನ್ನು ಪ್ರಸ್ತುತಪಡಿಸುವಂತಿದೆ.ಜೀವವೈವಿಧ್ಯತೆಗಳ ಸುಂದರವಾದ ಬದುಕನ್ನು ಪ್ರಸ್ತುತಪಡಿಸುವಂತಿದೆ.