ಸಿದ್ದಾಪುರ : ಹಾಡು ಹಗಲಲ್ಲೆ ಕಾಡುಕೋಣೆಗಳು ಅತಿ ವೇಗದಲ್ಲಿ ಜಿಗಿದು ರಸ್ತೆಗಳನ್ನ ದಾಟುತ್ತಿದ್ದು ದ್ವಿಚಕ್ರ ವಾಹನ ಸವಾರರಿಗೆ ಭಯದ ವಾತಾವರಣ ನಿರ್ಮಾಣವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಕಾಡು ಪ್ರಾಣಿಗಳು ದಾಟುವ ಸ್ಥಳಗಳಲ್ಲಿ ಎಚ್ಚರಿಕೆ ಫಲಕ ಹಾಕಬೇಕು ಮತ್ತು ತಡೆಬೇಲಿಯನ್ನ ನಿರ್ಮಿಸುವಂತೆ ಜೆಡಿಎಸ್ ರಾಜ್ಯ ಮುಖಂಡ ಇಳಿಯಾಸ ಸಾಬ್ ಆಗ್ರಹ ಮಾಡಿದ್ದಾರೆ.ತಾಲೂಕು ಅತಿಯಾದ ಕಾಡು ಪ್ರದೇಶವನ್ನು ಹೊಂದಿದ್ದು ಮೊದಲಿನಿಂದಲೂ ಕಾಡುಕೋಣಗಳ ಹಾವಳಿಗಳು ಇದ್ದು ಇತೀಚೆಗೆ ಅದು ಹೆಚ್ಚಾಗಿದೆ.
ವಾಹನಗಳು ಸಂಚಾರಿಸುವಾಗಲೇ ಅತಿ ವೇಗದಲ್ಲಿ ರಸ್ತೆಯನ್ನು ದಾಟುತ್ತಿದ್ದು ವಾಹನ ಸವಾರಿಗೆ ಆತಂಕ ಎದುರಾಗಿದೆ
ಈ ಸಂದರ್ಭದಲ್ಲಿ ಅವುಗಳು ಭಾರಿವಾಹನಗಳಿಗೆ ಸಿಲುಕಿದರೆ ಕಾಡುಕೋಣಗಳು ಸಾವನಪ್ಪಬಹುದು ಅಥವಾ ಅವುಗಳು ದ್ವಿಚಕ್ರ ವಾಹನ ಸವಾರರ ಮೇಲೆ ದಾಳಿ ಮಾಡಿದರೆ ಸವಾರರಿಗೂ ಪ್ರಾಣಪಾಯವಾಗಬಹುದು ಇಂತಹ ಘಟನೆಗಳು ಮರುಕಳಿಸುತ್ತಿದ್ದರು ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಯಾವುದೇ ರೀತಿಯಾದಂತಹ ಸುರಕ್ಷಿತ ಕ್ರಮವನ್ನು ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಕೂಡಲೆ ಇಲಾಖೆ ಅಧಿಕಾರಿಗಳು ಕಾಡುಕೋಣಗಳು ರಸ್ತೆ ದಾಟುವಂತಹ ಪ್ರದೇಶಗಳಲ್ಲಿ ಎಚ್ಚರಿಕೆ ಯ ನಾಮಫಲಕಗಳನ್ನು ಅಳವಡಿಸಬೇಕು ಹಾಗೂ ತಡೆ ಬೇಲಿಗಳನ್ನು ನಿರ್ಮಾಣ ಮಾಡಬೇಕು ಮನುಷ್ಯರ ಪ್ರಾಣ ರಕ್ಷಣೆಯ ಜೊತೆಗೆ ಕಾಡುಕೋಣೆಗಳ ರಕ್ಷಣೆಯು ಕೂಡ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಆಗಿರುತ್ತದೆ ಕೂಡಲೆ ಕ್ರಮವಹಿಸಬೇಕು ಎಂದು ಈ ಮೂಲಕ ಒತ್ತಾಯಿಸುತ್ತಿದ್ದೇನೆ ಎಂದರು