ಅಂಕೋಲಾ : ಕೆನರಾ ವೆಲಫೆರ್ ಟ್ರಸ್ಟಿನ ಪಿ.ಎಂ. ಹೈಸ್ಕೂಲ್ ಎನ್.ಸಿ.ಸಿ. ಘಟಕ ವತಿಯಿಂದ ವಿಶ್ವ ಯೋಗ ದಿನಾಚರಣೆಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಕ್ಕೆ ಕಾರವಾರ ಕುಮಟಾ ಡೈಯಟ್ ಉಪನಿರ್ದೇಶಕ ಎನ್.ಜಿ. ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಎನ್.ಸಿ.ಸಿ. ಕೆಡೆಟ್‌ಗಳಿಗೆ ಮತ್ತು ವಿದ್ಯಾರ್ಥಿಗಳಿಗೆ ಯೋಗ ಶಿಬಿರ ಹಮ್ಮಿಕೊಂಡು ಯೋಗದ ಮಹತ್ವ ತಿಳಿಸಿಕೊಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ. ಯೋಗವು ಮನುಷ್ಯನ ಬದುಕಿಗೆ ಪರಿಪೂರ್ಣತೆಯನ್ನು ಸಾಧಿಸಲು ಉತ್ತಮವಾದ ಮಾಧ್ಯಮವಾಗಿದೆ. ಯೋಗದ ಮಹತ್ವ ತಿಳಿದುಕೊಂಡವರಿಗೆ ರೋಗವಿಲ್ಲ ಎಂದರು.
ಮುಖ್ಯಾಧ್ಯಾಪಕ ಚಂದ್ರಶೇಖರ ಕಡೇಮನಿ ಮಾತನಾಡಿ, ಯೋಗದ ಮೂಲಕ ಆರೋಗ್ಯ ಕಾಪಾಡಿಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬೇಕೆಂದರು.
ಯೋಗ ಗುರು ವಿನಾಯಕ ಗುಡಿಗಾರ ಮಾತನಾಡಿದರು.
ಹಿರಿಯ ಶಿಕ್ಷಕಿ ಶೀಲಾ ಆಯ್. ಬಂಟ ವೇದಿಕೆಯಲ್ಲಿದ್ದರು.
ಶಿಕ್ಷಕ ಗಣಪತಿ ತಾಂದೇಲ್ ಸ್ವಾಗತಿಸಿದರು.ಶಿಕ್ಷಕ ಮುಗ್ದುಮ ಅಲಗೋಡಿ ವಂದಿಸಿದರು. ಶಿಕ್ಷಕ ರವಿ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು. ಎನ್.ಸಿ.ಸಿ. ಕೆಡೆಟ್‌ಗಳಿಂದ ಯೋಗದ ಪ್ರಾತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿನಿಯರಿಂದ ಯೋಗ ನೃತ್ಯ ಪ್ರದರ್ಶನ ನಡೆಯಿತು