2 ಸಾವಿರ ನೋಟ್ ಹೆಚ್ಚಾಗಿರುವುದಕ್ಕೆ 50 ಕೋಟಿ ಕೊಡಲು ಮುಂದಾದ ಸೃಜನ್ ಲೋಕೇಶ್?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಫ್ಯಾಮಿಲಿ ಗ್ಯಾಂಗ್‌ಸ್ಟರ್ ರಿಯಾಲಿ ಶೋನ ಸೃಜನ್ ಲೋಕೇಶ್ ನಿರೂಪಣೆ ಜೊತೆ ನಿರ್ಮಾಣ ಮಾಡುತ್ತಿದ್ದಾರೆ. ವಾಹಿನಿಯಲ್ಲಿ ಪ್ರಸಾರವಾಗುವ ಪ್ರತಿಯೊಂದು ಸೀರಿಯಲ್ ಫ್ಯಾಮಿಲಿ ಒಂದು ತಂಡವಾಗಿ ಸ್ಪರ್ಧಿಸಲಿದ್ದಾರೆ.  ಇದಕ್ಕೂ ಮುನ್ನ ಸೃಜನ್ ಪ್ರಚಾರಕ್ಕೆಂದು ವಿಡಿಯೋ ಮಾಡಿದ್ದರು, ನಿಮಗೆ 50 ಕೋಟಿ ಹಣ ಕೊಟ್ಟು ಒಂದು ದಿನದಲ್ಲಿ ಖರ್ಚು ಮಾಡಿ ಅಂದ್ರೆ ಎನ್ ಮಾಡುತ್ತೀರಾ ಎಂದು ಆಗ ವೆರೈಟಿ ವೆರೈಟಿ ಕಾಮೆಂಟ್ಸ್‌ ಬಂದಿತ್ತು. ಈ ವಿಡಿಯೋ ಬಗ್ಗೆ ಈಗ ಕ್ಲಾರಿಟಿ ಸಿಗುತ್ತಿದೆ. 

’50 ಕೋಟಿ ನಿಮ್ಮ ಬಳಿ ಇದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿರುವೆ ಹಾಗಂತ ನನ್ನ ಬಳಿ 2 ಸಾವಿರ ರೂಪಾಯಿ ಹೆಚ್ಚಾಗಿದೆ ಅಂತಲ್ಲ. ಜನರ ಬಾಯಾರಿಕೆ ಅಂತೆ 2 ಸಾವಿರ ಹೆಚ್ಚಿದ್ದರ ಅದನ್ನು ಬ್ಯಾಂಕಗಳಿಗೆ ಕೊಟ್ಟು ನೆಮ್ಮದಿಯಾಗಿ ಜೀವನ ಮಾಡುವೆ. ನನಗೆ ಹಣ ಇದ್ರೆ ಖುಷಿಯಿಂದ ಹೇಳಿಕೊಳ್ಳುವೆ ಮುಚ್ಚು ಮರೆ ಮಾಡುವೆ ಚಾನೆಲ್‌ನಲ್ಲಿ ಕೆಲಸ ಮಾಡುವವರು ನಮ್ಮ ಬಳಿ ಇರುವುದು ಎಲ್ಲಾ ಓಪನ್. ನನ್ನ ಬಳಿ 50 ಕೋಟಿ ಇದ್ರೆ ಟ್ಯಾಕ್ಸ್ ಕಟ್ಟಿಕೊಂಡು ನೆಮ್ಮದಿಯಾಗಿರುವೆ….

‘ನನ್ನ ಬಳಿ 50 ಕೋಟಿ ಇದ್ರೆ ಏನು ಮಾಡುಬೇಕು ಅನ್ನೋದು ಯೋಚನೆ ಮಾಡಿಲ್ಲ ಆದರೆ ಖರ್ಚು ಮಾಡುವುದು ತುಂಬಾ ಸುಲಭ ಆದರೆ ನಮ್ಮ ಇಡೀ ಬೆಂಗಳೂರಿನಲ್ಲಿರುವ 5 ಸಾವಿರ ಅಥವಾ 10 ಸಾವಿರ ಹೋಟೆಲ್‌ಗಳಲ್ಲಿ ನೆಮ್ಮದಿಯಾಗಿ ಮೂರು ಹೊತ್ತು ಊಟ ಮಾಡಿ ಎಂದು ಅನೌನ್ಸ್‌ ಮಾಡುವೆ. ಜನರಿಗೆ ಊಟ ಸಿಗುತ್ತದೆ ಹೋಟೆಲ್‌ಗೆ ಬ್ಯುಸಿನೆಸ್‌ ಕೂಡ ಆಗುತ್ತದೆ ಇದು ನನ್ನ ಪ್ಲ್ಯಾನ್ ತುಂಬಾ ಸುಲಭ ಖರ್ಚು ಮಾಡುವುದು’ ಎಂದು ಸೃಜನ್ ಮಾತನಾಡಿದ್ದಾರೆ.

‘ನಾನು ನಟಿ ಸುಷ್ಮಾ ಸೈ ರಿಯಾಲಿಟಿ ಶೋ ನಂತರ ಮತ್ತೊಮ್ಮೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು. 15 ವರ್ಷಗಳಿಂದ ನಾವಿಬ್ಬರು ಪರಿಚಯ. ಇಷ್ಟು ದಿನ ಎಲ್ಲರೂ ಸುಷ್ಮಾ ನೋಡಿದ್ದಾರೆ ಆದರೆ ಇಲ್ಲಿ ಭಾಗ್ಯ ಆಟ ಆಡುವುದನ್ನು ನೋಡುತ್ತಾರೆ. ಸುಷ್ಮಾ ತುಂಬಾ ತರ್ಲೆ. ನನಗೆ ತರ್ಲೆ ಮಾಡುವವರು ಸೆಟ್‌ನಲ್ಲಿ ಇರಬೇಕು ಖುಷಿಯಿಂದ ಕೆಲಸ ಮಾಡುತ್ತೀವಿ. ಮೊನ್ನೆ ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಅಖ್ತರ್‌ ಅವರನ್ನು ನಿಮ್ಮ ನೆಚ್ಚಿನ ಬ್ಯಾಟ್ಸ್‌ ಮ್ಯಾನ್ ಬೋಲರ್ ಯಾರು ಎಂದು ಪ್ರಶ್ನೆ ಮಾಡಿದಾಗ ಸಚಿನ್ ತೆಂಡೂಲ್ಕರ್ ನೋಡಿದರೆ ಅಯೋ ಪಾಪ ಅನಿಸುತ್ತದೆ ಏಕೆಂದರೆ ಕ್ರಿಕೆಟ್‌ನಲ್ಲಿರುವ ಗಟಾನುಗಟಿ ಗಳನ್ನು ಎದುರಿಸುವ ಪರಿಸ್ಥಿತಿ ಎದುರಾಗಿತ್ತು ಹಾಗಿದ್ದರೂ ಗೇಮ್‌ನ ಚಾಲೆಂಜ್‌ ಆಗಿ ಸ್ವಿಕರಿಸಿ ಟೀಂನ ಗೆಲ್ಲಿಸುವವರು ನಿಜವಾದ ಕ್ರಿಕೆಟರ್. ನನಗೂ ಅದೇ ರೀತಿ ಚಾಲೆಂಜ್‌ಗಳು ತುಂಬಾ ಇಷ್ಟ. ಎದುರು ನಿಂತು ಮಾತನಾಡುವವರು ಇದ್ರೆ ಮಾತ್ರ ನಾನು ಪಂಚ್ ಕೊಡಲು ಸುಲಭವಾಗುತ್ತದೆ ಒಬ್ಬರೇ ಮಾತನಾಡುವುದು ಕಷ್ಟ’ ಎಂದು ಸೃಜನ್ ಹೇಳಿದ್ದಾರೆ. 

‘ಲೋಕೇಶ್ ನಿರ್ಮಾಣ ಸಂಸ್ಥೆ ದೊಡ್ಡ ಮಟ್ಟದಲ್ಲಿ ಹೆಸರು ಮಾಡುವುದಕ್ಕೆ ಕಾರಣ ನಾನಲ್ಲ ಶ್ರಮದಿಂದ ಕೆಲಸ ಮಾಡುವ ನನ್ನ ತಂಡ. ಪ್ರೊಡಕ್ಷನ್ ಆರಂಭಿಸಿದಾಗ ತಂಡ ಮುಖ್ಯವಾಗುತ್ತದೆ ಒಬ್ಬೊಬ್ಬರಲ್ಲ. ತೆರೆ ಮೇಲೆ ನಾವು ಏನೇ ಕಾಣಿಸಿಕೊಂಡರೂ ನಮ್ಮ ಅಬ್ಬರ ಎಷ್ಟಿದ್ದರೂ ಹಿಂದಿನಿಂದ ನನ್ನನ್ನು ಹಿಡಿದಿಟ್ಟುಕೊಂಡಿರುವುದು ನನ್ನ ಟೀಂ. ತಂಡದ ಸಪೋರ್ಟ್‌ ಇಲ್ಲ ಅಂದರೆ ನಡೆಸುವುದಕ್ಕೆ ಕಷ್ಟವಾಗುತ್ತದೆ’ ಎಂದಿದ್ದಾರೆ ಸೃಜನ್.