ಕೇಂದ್ರೀಯ ಅಧಿಕಾರಿಗಳ ತಂಡದಿಂದ ಕೋಟಿತೀರ್ಥ ಸ್ವಚ್ಛತಾ ಕಾಮಗಾರಿ ವೀಕ್ಷಣೆ

ಗೋಕರ್ಣ: ಕೇಂದ್ರ ಸರ್ಕಾರದ ಜಲಶಕ್ತಿ ಅಭಿಯಾನದ ಕೇಂದ್ರೀಯ ಅಧಿಕಾರಿಗಳ ತಂಡ ಕೋಟಿತೀರ್ಥಕ್ಕೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಕೋಟಿತೀರ್ಥ ಮತ್ತು ಅಗಸ್ತ್ಯತೀರ್ಥ ಕೆರೆಯ ಹೂಳೆತ್ತಿದ ಕಾಮಗಾರಿ ಕುರಿತು ಅಧಿಕಾರಿಗಳು ಮಾಹಿತಿ ಪಡೆದರು.

ಕಾಮಗಾರಿ ವೀಕ್ಷಣೆ ಬಳಿಕ ಅಧಿಕಾರಿಗಳು ಪುರಾಣ ಪ್ರಸಿದ್ದ ಮಹಾಬಲೇಶ್ವರ ದೇವಾಲಯಕ್ಕೆ ತೆರಳಿ ಆತ್ಮಲಿಂಗ ದರ್ಶನ ಪಡೆದರು. ಈ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಅಧಿಕಾರಿಗಳನ್ನು ಗೌರವಿಸಲಾಯಿತು.

ಜಿಲ್ಲೆಯ ವಿವಿಧೆಡೆ ನಡೆದ ಕೆರೆ ಅಭಿವೃದ್ದಿ ಮತ್ತು ನರೇಗಾ ಯೋಜನೆಯಲ್ಲಿ ಕೈಗೊಂಡ ಕಾಮಗಾರಿಗಳನ್ನು ಕೇಂದ್ರೀಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಗೋಕರ್ಣದ ಭೇಟಿ ಬಳಿಕ ಬರ್ಗಿ ಮತ್ತು ಹೊನ್ನಾವರದಲ್ಲಿ ನಡೆದ ವಿವಿಧ ಕಾಮಗಾರಿಗಳನ್ನ ಪರಿಶೀಲಿಸಲು ತೆರಳಿದ್ದಾರೆ.

ಭಾರತ ಸರ್ಕಾರದ ಜಲಶಕ್ತಿ ಯೋಜನೆಯ ಉಪಕಾರ್ಯದರ್ಶಿ ಅಂಕಿತ್ ಮಿಶ್ರಾ ಮತ್ತು ಅಧಿಕಾರಿ ವರ್ಗ, ಜಿಲ್ಲಾ ಪಂಚಾಯತ ಅಭಿವೃದ್ದಿ ವಿಭಾಗದ ಉಪಕಾರ್ಯದರ್ಶಿ ಜಕ್ಕಪ್ಪಗೋಳ್, ನರೇಗಾ ಯೋಜನಾಧಿಕಾರಿ ಭಾಲಚಂದ್ರ ಪಟಗಾರ ಸೇರಿದಂತೆ ಹಲವರು ಈ ವೇಳೆ ಹಾಜರಿದ್ದರು.