ಮಂಗಳೂರು (ಜೂ.12): ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಅಕ್ಟೋಬರ್ 31ರ ವರೆಗೆ ಮುಂಗಾರು ವೇಳಾಪಟ್ಟಿ ಪರಿಷ್ಕರಿಸಲಾಗಿದೆ. ಜೂನ್ 10ರಿಂದ ಅ.31ರ ವರೆಗೆ ಹೊರಡುವ ಎಲ್ಲ ರೈಲುಗಳಿಗೆ ಇದು ಅನ್ವಯವಾಗಲಿದೆ. ಈ ವೇಳೆ ರೈಲುಗಳ ಆಗಮನ ನಿರ್ಗಮನದಲ್ಲಿ ಪರಿಷ್ಕರಣೆಯಾಗಲಿದೆ. ಕೊಂಕಣ ಮೂಲಕ ಸಂಚರಿಸುವ ಕೆಲವು ಪ್ರಮುಖ ರೈಲುಗಳ ವೇಳಾಪಟ್ಟಿಇಲ್ಲಿ ಕೊಡಲಾಗಿದೆ.
ನಂ.12620 ಮಂಗಳೂರು ಸೆಂಟ್ರಲ್ ಮುಂಬಯಿ ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 12.45(ಪ್ರಸ್ತುತ 2.20)ಕ್ಕೆ 1.35 ಗಂಟೆ ಮೊದಲು ಹೊರಡಲಿದೆ. ನಂ.12619 ಲೋಕಮಾನ್ಯ ತಿಲಕ್ ಟರ್ಮಿನಸ್-ಮಂಗಳೂರು ಸೆಂಟ್ರಲ್ ಮತ್ಸ್ಯಗಂಧ ಮಂಗಳೂರು ಸೆಂಟ್ರಲ್‌ಗೆ 2.30 ಗಂಟೆ ತಡವಾಗಿ ಬೆಳಗ್ಗೆ 10.10ಕ್ಕೆ (7.40) ಬರಲಿದೆ.
ನಂ.12133 ಮುಂಬಯಿ ಸಿಎಸ್‌ಎಂಟಿ-ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ಗೆ 2.35 ನಿಮಿಷ ತಡವಾಗಿ ಸಂಜೆ 3.40ಕ್ಕೆ(1.05) ಆಗಮಿಸಲಿದೆ. 12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಎಂಟಿ ಮಂಗಳೂರು ಜಂಕ್ಷನ್‌ನಿಂದ ಸಂಜೆ 4.35ಕ್ಕೆ(2.00) 2.35 ಗಂಟೆ ತಡವಾಗಿ ಹೊರಡಲಿದೆ.