ಅಂಕೋಲಾ : ರಾಷ್ಟ್ರಮಟ್ಟದ ಐಡಿಯಲ್ ಪ್ಲೇ ಅಬಾಕಸ್ ಚೆನೈ ವತಿಯಿಂದ ಮೌಂಟ್ ಲಿಟೆರಾ ಜಿ ಸ್ಕೂಲ್ ಸಾಂಕೋಲೆ ಜುವಾರಿನಗರ್ ಗೋವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಅಬಾಕಸ್ ಸ್ಪೀಡ್ ಅರಿಥ್‌ಮೆಟಿಕ್ ಕಾಂಪಿಟೇಶನ್‌ನಲ್ಲಿ ಐಪಿಎ ಅಂಕೋಲಾ ನ್ಯಾಶನಲ್ ಅಬಾಕಸ್ ಸಂಸ್ಥೆಯ 9 ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಸ್ಪರ್ದೆಯಲ್ಲಿ ವಿಸ್ಮಯಾ ಎಸ್. ಮತ್ತು ಸೋನಾಕ್ಷಿ ಆರ್. ನಾಯ್ಕ ನಾಲ್ಕನೇ ರ್ಯಾಂಕ್, ಸ್ಪಂದನಾ ಎಸ್. ಎ, ಸತ್ಯಂ ಜೆ. ದೇವರಬಾವಿ, ಆರುಷ್ ಪಿ.ಎಸ್, ತೇಜಾ ಸಿ. ನಾಯ್ಕ, ಅಭಿಷೇಕ ನಾಯಕ, ನಿಯತಾ ವಿ. ಪ್ರಭು, ಶ್ರಾವಣಿ ಡಿ. ಪ್ರಭು ಐದನೇ ರ್ಯಾಂಕ್ ಪಡೆದು ಸಾಧನೆ ಗೈದಿದ್ದಾರೆ.
ಸಂಸ್ಥೆಯ ಐಪಿಎ ನ್ಯಾಶನಲ್ ಅಬಾಕಸ್ ಫ್ರಾಂಚೈಸಿಯವರಾದ ಪ್ರಶಾಂತ ಎಸ್. ಶೆಟ್ಟಿ ಹಾಗೂ ಸಿಐ ಜಯಶ್ರೀ ಪಿ. ಶೆಟ್ಟಿ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ರ್ಯಾಂಕ್ ಪಡೆದ ಎಲ್ಲ ವಿದ್ಯಾರ್ಥಿಗಳಿಗೂ ಅಭಿನಂದಿಸಿರುತ್ತಾರೆ.
ಅಂಕೋಲಾ ಐಪಿಎ ಅಬಾಕಸ್ ಸಂಸ್ಥೆಗೆ ಬೆಸ್ಟ್ ಫ್ರಾಂಚೈಸಿ ಅವಾರ್ಡ್ ಲಭಿಸಿದ್ದು, ಜಯಶ್ರೀ ಪಿ. ಶೆಟ್ಟಿ ಹಾಗೂ ಪ್ರಶಾಂತ ಎಸ್. ಶೆಟ್ಟಿಯವರು ಪಡೆದುಕೊಂಡಿದ್ದಾರೆ.