ಸ್ಯಾಂಡಲ್‌ವುಡ್ ಬುಲ್ ಬುಲ್ ರಚಿತಾ ರಾಮ್ ಸದ್ಯಕ್ಕೆ ಬೇಡಿಕೆಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿ. ಕೈ ತುಂಬಾ ಆಫರ್‌ಗಳಿದೆ ಶೂಟಿಂಗ್ ಮಾಡಲು ಸಮಯವಿಲ್ಲ. ಎಲ್ಲರಿಗೂ ಕಾಲ್ ಶೀಟ್‌ನಲ್ಲಿ ಡೇಟ್ ಕೊಟ್ಟು ಕೊಟ್ಟು ಸಿನಿಮಾ ಸಹಿ ಮಾಡಿ ಮಾಡಿ ಒಟ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ರಚ್ಚು ಅಭಿಮಾನಿಗಳು ಎಷ್ಟು ಜನ ಇದ್ದಾರೆ ನೋಡಬೇಕು ಅಂದ್ರೆ ವೀಕೆಂಡ್‌ನಲ್ಲಿ ಅವರ ಮನೆ ಬಳಿ ಹೋಗಬೇಕು ಇಲ್ಲ ಅಂದ್ರೆ ಹುಟ್ಟುಹಬ್ಬಕ್ಕೆ ಕೇಕ್ ಮತ್ತು ಹಾರ ಹಿಡಿದುಕೊಂಡು ಬರ್ತಾರೆ ಆಗ ನೋಡಬೇಕು ಜನವೋ ಜನ. ಈ ವರ್ಷ ಹುಟ್ಟುಹಬ್ಬದ ಸಮಯದಲ್ಲಿ ರಚಿತಾ ರಾಮ್ ನೀಡಿದ ಹೇಳಿಕೆ ಈ ವೈರಲ್ ಆಗುತ್ತಿದೆ.
ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ಸಮಯದಲ್ಲಿ ಏನಾದರೂ ಒಂದು ಅಂದುಕೊಳ್ಳುವೆ ಸಾಧನೆ ಮಾಡುವೆ. ಆದರೆ 2023ರಲ್ಲಿ ನಾನು ಏನೂ ಅಂದುಕೊಳ್ಳುವುದಿಲ್ಲ ಪ್ರಾಮಾಣಿಕವಾಗಿ ಹೇಳಬೇಕು ಅಂದ್ರೆ ಈ ಸಲ ಏನೂ ಅಂದುಕೊಂಡಿಲ್ಲ ಏಕೆಂದರೆ ಅಂದುಕೊಂಡ ರೀತಿಯಲ್ಲಿ ಯಾವುದು ನಡೆಯುತ್ತಿಲ್ಲ. ಜೀವನದಲ್ಲಿ ಕಷ್ಟಗಳು ಬಂದ್ಹಂಗೆ ಬರ್ತಾ ಇರಲಿ ಏನೇ ಇದ್ದರೂ ಎದುರಿಸಲು ರೆಡಿಯಾಗಿರುವೆ. ಖುಷಿ ಆಯ್ತಾ ಖುಷಿಯಾಗಿ ಇರೋಣ. ಪ್ರತಿಯೊಬ್ಬರ ಜೀವನದಲ್ಲೂ ಮೇಲೆ ಕೆಳಗಿ ಇರುತ್ತದೆ ಪ್ರತಿ ಸಲನೂ ಯಶಸ್ಸು ಸಿಗುತ್ತದೆ ಯಶಸ್ಸು ಸಿಗಬೇಕು ಅಂದುಕೊಳ್ಳುವುದು ತಪ್ಪಾಗುತ್ತದೆ. ಸೋಲು ಅನುಭವಿಸಿದಾಗ ಅದನ್ನು ಅರ್ಥ ಮಾಡಿಕೊಳ್ಳಬೇಕು..ಯಾಕೆ ಸೋಲಾಯ್ತು ಅದನ್ನು ಹೇಗೆ ಸರಿ ಮಾಡಿಬೇಕು ಎಂದು ಯೋಚನೆ ಮಾಡಬೇಕು. ಕೆಲಸದ ಬಗ್ಗೆ ಫೋಕಸ್ ಮಾಡಬೇಕು ಸಾಧನೆ ಮಾಡಬೇಕು ಅನ್ನೋದು ನನ್ನ ಗುರಿ. ಭಗವಂತ ಏನು ಕಳುಹಿಸುತ್ತಾನೆ ಅದನ್ನು ಧೈರ್ಯದಿಂದ ಎದುರಿಸುವ ಶಕ್ತಿ ಮತ್ತು ಸಾಮರ್ಥ್ಯ ಕೊಡು ಎಂದು ಬೇಡುವೆ’ ಎಂದು ಖಾಸಗಿ ಕನ್ನಡ ಚಾನೆಲ್‌ನಲ್ಲಿ ರಚ್ಚು ಮಾತನಾಡಿದ್ದರು.