ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿ ಕನ್ನಡ ಚಿತ್ರರಂಗದಲ್ಲೇ ಕ್ಯೂಟ್‌ಪೇರ್ ಎನಿಸಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್ ಈಗ ಪಕ್ಕಾ ಫ್ಯಾಮಿಲಿ ಮ್ಯಾನ್.! ಇಬ್ಬರು ಮಕ್ಕಳ ಮುದ್ದಿನ ತಂದೆ.! ಇದೀಗ ಯಶ್ ಫ್ಯಾಮಿಲಿ ಮತ್ತೆ ಸುದ್ದಿಯಲ್ಲಿದೆ. ಯಾಕೆ ಗೊತ್ತಾ.? ಯಶ್ ಅವರ ಮಗನ ಮುದ್ದಾದ ವೀಡಿಯೋದಿಂದ.!
ಯಶ್ ‘ಬ್ಯಾಡ್ ಬಾಯ್’ ಅಂತೆ.!
ಹೌದು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಆಕ್ಟಿವ್ ಆಗಿರುವ ನಟಿ ರಾಧಿಕಾ ಪಂಡಿತ್ ಆಗಾಗ ತಮ್ಮ ಮಕ್ಕಳ ಕ್ಯೂಟ್ ಕ್ಯೂಟ್ ವೀಡಿಯೋವನ್ನ ಶೇರ್ ಮಾಡುತ್ತಾರೆ. ಯೆಸ್.! ಮೊನ್ನೆಯಷ್ಟೇ ಯಶ್ ಅವರ ಮಗ ‘ಯಥರ್ವ್’ ಯಶ್ ಅವ್ರನ್ನ ‘ಬ್ಯಾಡ್ ಬಾಯ್’ ಎಂದು ಕರೆದ ಮುದ್ದಾದ ವೀಡಿಯೋ ಸಖತ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಫುಲ್ ವೈರಲ್.!
ರಾಧಿಕಾ ಪಂಡಿತ್ ಹಂಚಿಕೊಂಡಿರೋ ವಿಡಿಯೋದಲ್ಲಿ ಯಥರ್ವ್, ಅಪ್ಪ ಯಶ್ ಮೇಲೆ ಮುನಿಸಿಕೊಂಡಿದ್ದಾನೆ.! ಹೀಗಾಗಿ ಅಪ್ಪನನ್ನ ‘ಬ್ಯಾಡ್ ಬಾಯ್’ ಎಂದಿದ್ದಾನೆ.! ಅಮ್ಮನನ್ನ ‘ಗುಡ್ ಗರ್ಲ್’ ಎಂದಿದ್ದಾನೆ.! ಹಠ ಮಾಡುತ್ತಿದ್ದ ಯಥರ್ವ್ ನನ್ನ ಯಶ್ ಸಮಾಧಾನಪಡಿಸಲು ಹೋದಾಗ ಮುದ್ದು ಮುದ್ದಾಗಿ ಮಾತನಾಡಿದ್ದಾನೆ. ಅಲ್ಲ ಕಣೋ ಅಪ್ಪ ಗುಡ್ ಬಾಯ್ ಅಲ್ವಾ.? ಎಂದು ಯಶ್ ಹೇಳಿದಾಗ ಯಥರ್ವ್ ಮಾತ್ರ ಇಲ್ಲ’ಅಪ್ಪ ಬಾಡ್ ಬಾಯ್’ ‘ಅಮ್ಮ ಗುಡ್ ಗರ್ಲ್’ ಎಂದು ಮತ್ತೆ ಮತ್ತೆ ಹೇಳಿದ್ದಾನೆ. ಮುದ್ದು ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.