ದಾಂಡೇಲಿ :ದಾಂಡೇಲಿಯ ಉದ್ಯಮಿ ಹಾಗೂ ಸಮಾಜ ಸೇವಕರಾದ ಪ್ರೇಮಾನಂದ ಗವಸ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಧಾನ

ದಾಂಡೇಲಿ : ನಗರದ ಉದ್ಯಮಿ ಹಾಗೂ ಸಮಾಜ ಸೇವಕರಾದ ಪ್ರೇಮಾನಂದ ಗವಸ್ ಅವರು ದೆಹಲಿಯ ವರ್ಲ್ಡ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮೀಶನ್ ಇವರು ಕೊಡಮಾಡುವ ಪ್ರತಿಷ್ಟಿತ ಗೌರವ ಡಾಕ್ಟರೇಡ್ ಪದವಿಗೆ ಭಾಜನರಾಗಿದ್ದಾರೆ.

ಸಾಮಾಜಿಕ ಜಾಗೃತಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಿದ ಹಿನ್ನಲೆಯಲ್ಲಿ ಪ್ರೇಮಾನಂದ ಗವಸ ಅವರಿಗೆ ಈ ಗೌರವವನ್ನು ಪ್ರಧಾನ ಮಾಡಲಾಗಿದೆ. ದೆಹಲಿಯಲ್ಲಿ ಡಾ.ಅಂಬೇಡ್ಕರ್ ಅಂತರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ಪ್ರೇಮಾನಂದ ಗವಸ ಅವರು ಸ್ವೀಕರಿಸಿದರು.

ಈ ಸಮಾರಂಭದಲ್ಲಿ ಕೇಂದ್ರ ಸಚಿವರುಗಳಾದ ಮೀನಾಕ್ಷಿ ಲೇಖಿ, ಡಾ.ಹರ್ಷವರ್ಧನ್ ಮತ್ತು ಫಗ್ಗನ್ ಸಿಂಗ್ ಕುಲಾಸ್ತೆ, ಅಂತರಾಷ್ಟ್ರೀಯ ಕ್ರಿಕೆಟ್ ತೀರ್ಪುಗಾರರಾದ ಅನಿಲ್ ಕುಮಾರ್ ಚೌಧರಿ, ಲೋಕಸಭಾ ಸದಸ್ಯರಾದ ಭಾರತಿ ಧೀರುಬಾಯಿ ಶಿವಲ್, ಕ್ರಿಕೆಟ್ ವೀಕ್ಷಣೆಗಾರ ಅಂಜುಂ ಚೋಪ್ಡಾ, ಮಾಜಿ ಕ್ರಿಕೆಟಿಗರಾದ ಚೇತನ್ ಶರ್ಮಾ ಮತ್ತು ಮದನಲಾಲ್ ಹಾಗೂ ವಲ್ಡ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮೀಶನ್ ಇದರ ಮುಖ್ಯಸ್ಥರಾದ ತಪನ್ ಕುಮಾರ್ ರಾವುತ್ತಾರಿ, ವರ್ಲ್ಡ್ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮೀಶನ್ ಇದರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕವಿತಾ ಬಜಾಜ್, ವ್ಯವಸ್ಥಾಪಕಿ ಶಿವಾನಿ ಶರ್ಮಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಶುಭಂ ಸಿನ್ಹಾ ಮೊದಲಾದ ಗಣ್ಯರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಯ್ತು.