ಅಂಟಾರ್ಟಿಕಾದಲ್ಲಿ ಉಂಟಾದ ಭೂಕಂಪನಗಳ ಸಾವಿರಾರು ಸೀಸ್ಮಿಕ್ ದಾಖಲೆಗಳನ್ನು ಹೈ-ಡೆಫಿನಿಶನ್ ಇಮೇಜಿಂಗ್ ವಿಧಾನದಲ್ಲಿ ಪರೀಕ್ಷಿಸಿ ವಿಜ್ಞಾನಿಗಳು ಅಲ್ಲಿ ಪರ್ವತಗಳು ಇರುವುದನ್ನು ಮತ್ತು ಅವುಗಳ ಎತ್ತರವನ್ನು ಅಂದಾಜಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ
ಫೀನಿಕ್ಸ್ (ಜೂನ್ 12, 2023): ಜಗತ್ತಿನ ಅತಿ ಎತ್ತರದ ಪರ್ವತ ಎಂದು ಹೇಳಲಾಗುವ ಮೌಂಟ್ ಎವರೆಸ್ಟ್‌ಗಿಂತ ಕನಿಷ್ಠ 3ರಿಂದ 4 ಪಟ್ಟು ಎತ್ತರವಾಗಿರುವ ಪರ್ವತಗಳನ್ನು ಭೂಮಿಯ ಅಡಿಯಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ! ಅಂಟಾರ್ಟಿಕಾ ಖಂಡದ ಅಡಿಯಲ್ಲಿ ಈ ಪರ್ವತಗಳಿವೆ ಎಂದು ಹೇಳಿದ್ದಾರೆ.
ಅಮೆರಿಕದ ಅರಿಜೋನಾ ಯುನಿವರ್ಸಿಟಿ ಹಾಗೂ ಅಲಬಾಮಾ ಯುನಿವರ್ಸಿಟಿಯ ಭೂವಿಜ್ಞಾನಿಗಳು ಭೂಕಂಪನ ಸಂಭವಿಸಿದಾಗ ಸೀಸ್ಮಿಕ್ ಉಪಕರಣಗಳು ಕಳುಹಿಸುವ ಸಿಗ್ನಲ್‌ಗಳನ್ನು ಅಧ್ಯಯನ ಮಾಡಿ ಅಂಟಾರ್ಟಿಕಾದ ಅಡಿಯ ನೆಲದಾಳದಲ್ಲಿ 24 ಮೈಲು (38 ಕಿ.ಮೀ.) ಎತ್ತರದವರೆಗಿನ ಪರ್ವತಗಳಿವೆ ಎಂದು ಕಂಡುಹಿಡಿದಿದ್ದಾರೆ. ಮೌಂಟ್ ಎವರೆಸ್ಟ್‌ನ ಎತ್ತರ 5.5 ಮೈಲು (8.8 ಕಿ.ಮೀ.).