ಉತ್ತರ ಕನ್ನಡ : ಸಾರಿಗೆ ಬಸ್ ನಲ್ಲಿ ಉಚಿತ ಪ್ರಯಾಣ, ಖುಷಿಯೊಂದಿಗೆ ಪ್ರಯಾಣಿಸಿದ ಫಲಾನುಭವಿಗಳು.

ಸಿದ್ದಾಪುರ : ರಾಜ್ಯಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಗೆ
ಸ್ಥಳೀಯ ಬಸ್ ನಿಲ್ದಾಣದಲ್ಲಿ ತಹಸೀಲ್ದಾರ ಮಂಜುನಾಥ
ಮುನ್ನೊಳ್ಳಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು
ಮಹಿಳೆಯರಿಗೆ ಅನುಕೂಲವಾಗುವ ಈ ಯೋಜನೆ
ಇಂದಿನಿಂದ ಜಾರಿಗೆ ಬರುತ್ತಿದ್ದು ಮಹಿಳೆಯರು ಇದರ
ಉಪಯೋಗವನ್ನು ಪಡೆದುಕೊಳ್ಳಬೇಕು ಸಾರಿಗೆ
ಸಿಬ್ಬಂದಿಗಳು ಈ ಯೋಜನೆಯ ಜಾರಿಗೆ ಮಹಿಳೆಯರ
ಜೊತೆಗೆ ಸಹಕರಿಸಿಬೇಕು ಯಾವುದೇ
ಗೊಂದಲವಾಗದoತೆ ನೋಡಿಕೊಳ್ಳಬೇಕು ಎಂದು
ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಾತನಾಡಿ,
ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆಯುವ
ಪಕ್ಷವಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವ
ಹಲವು ಯೋಜನೆಗಳಿಗೆ ಸರಕಾರ ಚಾಲನೆ ನೀಡಲಿದೆ.
ನಮ್ಮ ಗ್ಯಾರಂಟಿಗಳ ಬಗ್ಗೆ ಯಾವುದೇ ಅನುಮಾನ
ಬೇಡ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ
ತರಲಾಗುವುದು ಬಿಜೆಪಿಯ ನರೇಂದ್ರ
ಮೋದಿಯವರು ತಾನು ಅಧಿಕಾರಕ್ಕೆ ಬಂದರೆ
ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷರೂ.
ಹಾಕುವುದಾಗಿ ಹೇಳಿದ್ದರು ಆದರೆ ಇಲ್ಲಿಯವರೆಗೆ ಒಂದೇ
ಒಂದು ರೂಪಾಯಿ ಹಾಕಿಲ್ಲ ಆದರೆ ನಾವು ಹಾಗಲ್ಲ ಏನು
ಹೇಳಿದ್ದೆವೋ ಅದನ್ನು ಮಾಡುತ್ತೆವೆ ಎಂದು ಹೇಳಿದರು.
ಸಾರಿಗೆ ಅಧೀಕ್ಷಕ ಮಹೇಶ ಜೊಗಳೇಕರ,
ನಿಯಂತ್ರಣಾಧಿಕಾರಿ ಎಂ.ಎನ್.ನಾಯ್ಕ,ಪಿಎಸ್‌ಐ ಮಂಹತೇಶ
ಕುಂಬಾರ್ , ಕಾಂಗ್ರೆಸ್ ಮುಖಂಡ ,ವಿ.ಎನ್.ನಾಯ್ಕ ಸುರೇಂದ್ರ ಗೌಡ , ಕೆ ಟಿ ಹೊನ್ನೇ ಗುಂಡಿ , ಹರೀಶ್ ಹಸ್ವಿಗೋಳಿ, ವಿಶ್ವ ಗೌಡ ಇಟಗಿ, ಹಾರೂನ್ ಸಾಬ್ ಬಿಳಗಿ, ಗಾಂಧೀಜಿ ನಾಯ್ಕ್,
ಮುಂತಾದವರು ಉಪಸ್ಥಿತರಿದ್ದರು

ಈ ಯೋಜನೆ ಜಾರಿಗೆ ಬಂದಿರುವುದರಿಂದ ಮಹಿಳೆಯರಿಗೆ ಪ್ರಯಾಣದ ಹಣ ಉಳಿತಾಯವಾಗುತ್ತದೆ ಆ ಹಣವನ್ನ ಖರ್ಚಿಗೆ ಉಪಯೋಗವಾಗುತ್ತದೆ ಎಂದು ಶಕ್ತಿ ಯೋಜನೆಯ ಫಲಾನುಭವಿ ಪ್ರಯಾಣಿಕರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
ಪಟ್ಟಣದ ಮುಖ್ಯ ಬಸ್ ನಿಲ್ದಾಣದಲ್ಲಿ ರವಿವಾರ ಶಕ್ತಿ ಯೋಜನೆಗೆ ಅಧಿಕಾರಿಗಳು ಚಾಲನೆ ನೀಡಿದ ನಂತರ ಉಚಿತವಾಗಿ ಪ್ರಯಾಣಿಸಿ ಮಾಧ್ಯಮದೊಂದಿಗೆ ಮಾತನಾಡಿದರು.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಇಂದಿನಿಂದ ಆರಂಭಗೊಂಡಿದೆ. ತಾಲೂಕಿನ ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು .
ಶಕ್ತಿ ಯೋಜನೆ ಮಹಿಳೆಯರಿಗೆ ಶಕ್ತಿ ನೀಡಲಿದೆ. ಉದ್ಯೋಗಸ್ಥ ಮಹಿಳೆಯರಿಗೆ, ದಿನಗೂಲಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪೂರಕವಾಗಿದೆ. ಸ್ತ್ರೀಯರ ಉನ್ನತಿಗೆ ಮತ್ತು ಸಾಮಾಜಿಕ ಸ್ಥಾನಮಾನದ ಹೆಚ್ಚಳಕ್ಕೆ ಇದು ಕೊಡುಗೆ ನೀಡಲಿ ಎಂದು ಮಹಿಳಾ ಪ್ರಯಾಣಿಕರು ಪ್ರಯಾಣದ ನಂತರ ಅನಿಸಿಕೆ ಹಂಚಿಕೊಂಡರು.