ಕೋಲಾರ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೂ ವಿದ್ಯುತ್ ಬಿಲ್ ನಾವೇ ಕಟ್ಟುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಅವರು, ಈಗ ಬಂದಿರುವ ವಿದ್ಯುತ್ ಬಿಲ್ ನಾವೇ ಕಟ್ಟುತ್ತೇವೆ. ವಿದ್ಯುತ್ ದರ ಏರಿಕೆ ಹಿಂದಿನ ಸರ್ಕಾರ ಮಾಡಿರುವುದು. ಕರ್ನಾಟಕ ವಿದ್ಯುತ್ ಶಕ್ತಿ ಆಯೋಗ ದರ ಏರಿಕೆ ಮಾಡುವುದು ಇಳಿಸುವುದು. ಬರುವ ತಿಂಗಳಿನಿಂದ ನಾವೇ ವಿದ್ಯುತ್ ಕಟ್ಟುತ್ತೇವೆ ಎಂದರು.
50 ಸಾವಿರ ಕೋಟಿ ವೆಚ್ಚವಾಗುತ್ತದೆ. ಹಣ ಸಂಗ್ರಹ ಮಾಡುವ ಶಕ್ತಿ ಸರ್ಕಾರಕ್ಕೆ ಮತ್ತು ಸಿದ್ದರಾಮಯ್ಯ ಅವರಿಗೆ ಇದೆ. ಬಡವರಿಗೆ ನೀಡಿರುವ ಯೋಜನೆಗಳನ್ನು ಸರ್ಕಾರಕ್ಕೆ ಹೊರೆ ಬೀಳದಂತೆ ಕಾಂಗ್ರೆಸ್ ಪಕ್ಷ ನಿಭಾಯಿಸಲಿದೆ.
ಇತ್ತ ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ, ವಿದ್ಯುತ್ ದರ ಏರಿಸಿಲ್ಲ. ಹಿಂದಿನ ಸರ್ಕಾರದಲ್ಲಿ ವಿದ್ಯುತ್ ದರ ಹೆಚ್ಚಳ ಆಗಿತ್ತು. ನಾವು ಬರೋ ಮೊದಲೇ ಏರಿಕೆ ಆಗಿತ್ತು. ಚುನಾವಣೆ ನೀತಿ ಸಂಹಿತೆ ಇರೋದ್ರೀಂದ ಚುನಾವಣೆ ಆದ ಮೇಲೆ ಬಿಲ್ ಬಂದಿದೆ. ನಾವು ಬಿಲ್ ಹೆಚ್ಚಳ ಮಾಡಿಲ್ಲ. ಪ್ರತಿ ವರ್ಷ ಬಿಲ್ ಪರಿಷ್ಕರಣೆ ಮಾಡೋಕೆ ಕಮೀಷನ್ ಇದೆ ಅದು ಮಾಡುತ್ತೆ. ಬಿಜೆಪಿ ಅವರು ಗುಲ್ಲು ಎಬ್ಬಿಸುತ್ತಿದ್ದಾರೆ. ಆದರೆ ಏಪ್ರಿಲ್ 1 ರಿಂದ ಹೆಚ್ಚಳ ಅಂತ ಹಿಂದೆಯೇ ಆಗಿತ್ತು ಎಂದಿದ್ದಾರೆ