ದಾಂಡೇಲಿ : ತಾಲೂಕಿನ ಅಂಬಿಕಾನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬೊಮ್ಮನಳ್ಳಿ ಡ್ಯಾಂ ಹತ್ತಿರದಲ್ಲಿ ಬೃಹತ್ ಗಾತ್ರದ ಒಂಟಿ ಸಲಗವೊಂದು ರಸ್ತೆ ದಾಟುತ್ತಿರುವ ಅಪೂರ್ವ ದೃಶ್ಯ ಗುರುವಾರ ಕಂಡು ಬಂದಿದೆ. ಆನೆಯ ಗಾತ್ರ ನೊಡಿದರೆ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲೆ ಅತಿ ದೊಡ್ಡ ಒಂಟಿ ಸಲಗ ಎಂದು ಅಂದಾಜಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಅಲ್ಲಲ್ಲಿ ಆನೆಗಳು ದರ್ಶನ ಭಾಗ್ಯನೀಡುತ್ತಿದೆಯಾದರೂ, ಯಾವುದೇ ರೀತಿಯ ಹಾನಿ ಇನ್ನಿತರ ತೊಂದರೆಯಾಗುವ ರೀತಿಯಲ್ಲಿ ವರ್ತಿಸಿರುವುದು ಎಲ್ಲಿಯೂ ಕಂಡು ಬಂದಿಲ್ಲ. ಇಲ್ಲಿ ಬೊಮ್ಮನಳ್ಳಿ ಡ್ಯಾಂ ಹತ್ತಿರ ಕಂಡು ಬಂದ ಆನೆಯನ್ನು ನೋಡಿದೊಡನೆಯೆ ಒಮ್ಮೆ ಭಯವಾದರೂ, ಆನೆ ಮಾತ್ರ ಯಾವುದೆ ರೀತಿಯಲ್ಲಿ ತೊಂದರೆಯನ್ನು ನೀಡದೆ ತನ್ನ ಪಾಡಿಗೆ ತಾನು ಎಂಬಂತೆ ಅರಣ್ಯದ ಕಡೆಗೆ ಹೆಜ್ಜೆಯಿಟ್ಟಿತು.