ಪ್ಯಾರಿಸ್: ಫ್ರೆಂಚ್ ಆಲ್ಪ್ಸ್‌ನ ಸುಂದರವಾದ ಪಟ್ಟಣವಾದ ಅನ್ನೆಸಿಯಲ್ಲಿ ಚಾಕು ದಾಳಿಯಲ್ಲಿ ಎಂಟು ಮಕ್ಕಳು ಮತ್ತು ಒಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕನಿಷ್ಠ ಮೂವರು ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಬೆಳಿಗ್ಗೆ 9.45 ರ ಸುಮಾರಿಗೆ, ಪಟ್ಟಣದ ಪ್ರಸಿದ್ಧ ಕೆರೆಯ ಸಮೀಪವಿರುವ ಮಕ್ಕಳ ಆಟದ ಮೈದಾನಕ್ಕೆ ಚಾಕು ಹಿಡಿದ ವ್ಯಕ್ತಿಯೊಬ್ಬರು ಪ್ರವೇಶಿಸಿದ್ದು, ಅಲ್ಲಿ ಆಟವಾಡುತ್ತಿದ್ದ ಸುಮಾರು ಮೂರು ವರ್ಷ ವಯಸ್ಸಿನ ಮಕ್ಕಳ ಗುಂಪಿನ ಮೇಲೆ ದಾಳಿ ಮಾಡಿದರು ಎಂದು ಭದ್ರತಾ ಮೂಲ ಮತ್ತು ಸ್ಥಳೀಯ ಅಧಿಕಾರಿ ಎಎಫ್ಪಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಜನರು ಓಡುತ್ತಿದ್ದರು, ಅಳುತ್ತಿದ್ದರು, ಭಯಭೀತರಾಗಿದ್ದರು. ಇದು ಭಯಾನಕವಾಗಿದೆ ಎಂದು ನೆಲ್ಲಿ ಎಂಬ ಹೆಸರಿನ ಪ್ರತ್ಯಕ್ಷದರ್ಶಿ ಫ್ರಾನ್ಸ್ ಇನ್ಫೋ ರೇಡಿಯೊಗೆ ಹೇಳಿದ್ದಾರೆ. ನಾನು ಗಾಬರಿಗೊಂಡಿದ್ದೇನೆ. ಮಕ್ಕಳ ಮೇಲೆ ದಾಳಿ ಮಾಡುವುದು ಖಂಡನೀಯ. ನಿವಾಸಿಗಳು ಮತ್ತು ಪ್ರವಾಸಿಗರು ಇಷ್ಟಪಡುವ ಶಾಂತಿಯುತವಾದ ಸ್ಥಳದಲ್ಲಿ ಇಂದು ಬೆಳಿಗ್ಗೆ ಏನಾಯಿತು ಎಂಬುದು ಯೋಚಿಸಲಾಗದು. ನಾವು ತತ್ತರಿಸಿದ್ದೇವೆ ಎಂದು ಸಂಸದ ವರ್ಜಿನ್ ಡುಬಿ-ಮುಲ್ಲರ್ ಹೇಳಿದ್ದಾರೆ.